ಶರಾವತಿ ವಿದ್ಯುತ್ ಉತ್ಪಾದನೆ ನಿಲ್ಲಿಸಿ, ಲಾಂಚ್ ಸಾರಿಗೆ ಸಂಪರ್ಕ ಉಳಿಸಬೇಕುಶರಾವತಿ ಮುಳುಗಡೆ ಸಂತ್ರಸ್ತರ ಗೋಳು, ಕಣ್ಣೀರ ಕಥೆಗಳು ಒಂದೆರಡಲ್ಲ. ಹೆಜ್ಜೆ ಹೆಜ್ಜೆಗೂ ಅವರು ಅನುಭವಿಸುತ್ತಿರುವ ಬವಣೆ ಅವರಿಗಲ್ಲದೇ, ಇನ್ಯಾರಿಗೂ ತಿಳಿದಿರಲು ಸಾಧ್ಯವೂ ಇಲ್ಲ. ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದು, ಹಿನ್ನೀರು ಗ್ರಾಮಗಳ ನಿವಾಸಿಗಳು ನೆಚ್ಚಿಕೊಂಡಿರುವ ಲಾಂಚ್ ಸಂಚಾರಕ್ಕೆ ಈಗ ಸಂಚಕಾರ ಬಂದಿದೆ. ಮಳೆ ಕೊರತೆ ದುಷ್ಪರಿಣಾಮ ಹೇಗಿದೆಯೆಂದರೆ, ಇಡೀ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸುವ ಶರಾವತಿ ನೀರು ಬಳಸಬೇಡಿ, ಮಳೆಗಾಲದವರೆಗೆ ಲಾಂಚ್ ಸಂಚಾರಕ್ಕೆ ಅವಕಾಶ ನೀಡಿ. ಈ ಅವಕಾಶ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಗಮನಹರಿಸಬೇಕು ಎಂದು ಕರೂರು ಭಾರಂಗಿ ಹೋಬಳಿ ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಪ್ರಸನ್ನ ಕೆರೆಕೈ ಒತ್ತಾಯಿಸುವುದಕ್ಕೂ ಕಾರಣವಾಗಿದೆ.