ಕೋಟಿಪುರದಲ್ಲಿ ಮಂಗನ ಶವ ಪತ್ತೆ: ಮೆರವಣಿಗೆ ನಡೆಸಿ, ಹೂಳಿದ ಗ್ರಾಮಸ್ಥರು!ಸೊರಬ ತಾಲೂಕಿನ ಕೋಟಿಪುರಲ್ಲಿ ಶನಿವಾರ ಮಂಗವೊಂದು ಮೃತಪಟ್ಟ ಹಿನ್ನೆಲೆ ಪೂಜಿಸಿ, ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮಾಡಿ, ವಿಧಿವಿಧಾನದಂತೆ ನೆಲದಲ್ಲಿ ಹೂಳಿ, ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ, ಈ ಬಗ್ಗೆ ಅರಣ್ಯ ಇಲಾಖೆ, ಪಶುವೈದ್ಯ ಇಲಾಖೆಗೆ ಮಾಹಿತಿಯೇ ನೀಡಿಲ್ಲ. ಕೆಲ ಗ್ರಾಮಗಳಲ್ಲಿ ಮಂಗನಕಾಯಿಲೆ ಹಾವಳಿ ಇದ್ದಾಗ್ಯೂ, ಕೋತಿಯ ಶವಪರೀಕ್ಷೆ ನಡೆಸಲು ಇಲಾಖೆ ಗಮನಕ್ಕೆ ತಾರದೇ ಅಂತ್ಯಸಂಸ್ಕಾರ ನಡೆಸಲಾಗಿದೆ.