ಕಾಮದಹನ, ಹೋಳಿ ಸಂಭ್ರಮದಲ್ಲಿ ಕಾನೂನು ಮೀರದಿರಿಜಿಲ್ಲಾದ್ಯಂತ ಮಾ.24ರಂದು ಕಾಮದಹನ, 25ರಂದು ಹೋಳಿಹಬ್ಬ ಆಚರಣೆ ಹಿನ್ನೆಲೆ ಸಾರ್ವಜನಿಕರು ನೆಮ್ಮದಿಗೆ ಭಂಗವಾಗದಂತೆ ಹಬ್ಬ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ನೀಡಲಾಗಿರುವ ಸೂಚನೆಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಿ, ಸಹಕರಿಸಬೇಕು ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ದಾವಣಗೆರೆಯಲ್ಲಿ ತಿಳಿಸಿದ್ದಾರೆ.