ಶಿವಮೊಗ್ಗದಲ್ಲಿ ಎನ್ಎಸ್ಯುಐ ಘಟಕದಿಂದ ಯುವಜ್ಯೋತಿ ಜಾಥಾಶಿವಮೊಗ್ಗದಲ್ಲಿ ಜ.12ರಂದು ಯುವನಿಧಿಗೆ ಚಾಲನೆ ದೊರೆಯಲಿದ್ದು, ಕಾಂಗ್ರೆಸ್ ನಿರಂತರ ಕಾರ್ಯಕ್ರಮ, ಸುದ್ದಿಗೋಷ್ಠಿಯಂಥ ಕಾರ್ಯಕ್ರಮಗಳ ಮೂಲಕ ಭರ್ಜರಿ ಪ್ರಚಾರ ನೀಡುತ್ತಿದೆ. ಅಂತೆಯೇ, ಬುಧವಾರ ಸಂಜೆ ಶಿವಮೊಗ್ಗದಲ್ಲಿ ಜಿಲ್ಲಾ ಎನ್ಎಸ್ಯುಐ ಘಟಕದ ನೇತೃತ್ವದಲ್ಲಿ ಯುವಜ್ಯೋತಿ ಜಾಥಾ ನಡೆಯಿತು. ಸಚಿವರಾದ ಮಧು ಬಂಗಾರಪ್ಪ, ಶರಣ ಪ್ರಕಾಶ್ ಪಾಟೀಲ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.