ಕ್ರೈಸ್ತ ಪಾದ್ರಿಗಳಿಂದ ಕನ್ನಡಕ್ಕೆ ಅಮೋಘ ಕೊಡುಗೆಕ್ರೈಸ್ತ ಪಾದ್ರಿಗಳು ಕನ್ನಡಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿ, ಕೊಡುಗೆ, ಕನ್ನಡದ ಆಧುನಿಕ ಪ್ರಜ್ಞೆಯನ್ನು ನಮ್ಮೆದುರಿಗೆ ಇಟ್ಟಿದ್ದಾರೆ. ಸಾಮ್ರಾಜ್ಯಶಾಹಿಯ ಭಾಗವಾಗಿ ಭಾರತಕ್ಕೆ ಬಂದ ರೆ.ಕಿಟೆಲ್ ಮುಂತಾದ ಕ್ರೈಸ್ತ ಪಾದ್ರಿಗಳು ಈ ನೆಲದ ಬಗ್ಗೆ ಮೋಹ ಬೆಳೆಸಿಕೊಂಡು ಇಲ್ಲಿನ ಭಾಷೆ, ಸಂಸ್ಕೃತಿ, ಜನಜೀವನ ಕುರಿತು ಇನ್ನಿಲ್ಲದಂತೆ ಕೆಲಸ ಮಾಡಿದ್ದಾರೆ. ಅವರು ಕನ್ನಡ ಭಾಷೆ ಮತ್ತು ವಿದ್ವತ್ತಿಗೆ ನೀಡಿದ ಕೊಡುಗೆ ಅನನ್ಯ, ಅಮೋಘವಾಗಿದೆ ಎಂದು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಸಾಗರ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.