ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ: ದಿನೇಶ ಶಿರುವಾಳಸಾಗರ ತಾಲೂಕಿನಲ್ಲಿ ಮುಳುಗಡೆ ಸಂತ್ರಸ್ತರ ಸಂಕಷ್ಟಗಳಿಗೆ ಯಾವ ಸರ್ಕಾರಗಳೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಇಲ್ಲಿಯ ಜನರ ಅರಣ್ಯ ಭೂಮಿ, ಬಗರ್ಹುಕುಂ ಸಮಸ್ಯೆ, ಬದುಕು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆದ್ದರಿಂದ ಈಗಾಗಲೇ ರದ್ದುಪಡಿಸಿರುವ ಟಾಸ್ಕ್ಪೋರ್ಸ್ ಶೀಘ್ರ ರಚನೆ ಮಾಡಬೇಕು, ಶರಾವತಿ, ಚಕ್ರಾ, ಸಾವೆಹಕ್ಲು, ವರಾಹಿ ಸೇರಿದಂತೆ ಬೇರೆ ಬೇರೆ ಮುಳುಗಡೆ ಸಂತ್ರಸ್ತರಿಗೆ ಸ್ಪಂದಿಸಬೇಕು ಎಂದು ಸಾಗರದ ತಾಳಗುಪ್ಪದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ದಿನೇಶ ಶಿರಿವಾಳ ಆಗ್ರಹಿಸಿದ್ದಾರೆ.