ಬಸವತತ್ವ ವಿಶ್ವಾದ್ಯಂತ ಪ್ರಸರಿಸಿದ ಮಾತೆ ಮಹಾದೇವಿದಾರ್ಶನಿಕ ಸಂತ, ಗುರು ಬಸವಣ್ಣ ಅವರ ವಿಶ್ವಮಾನ್ಯ ಸಂದೇಶಗಳನ್ನು ಶ್ರೇಷ್ಠ ಸನ್ಯಾಸಿನಿ, ಶ್ರೀ ಮಾತೆ ಮಹಾದೇವಿ ಅವರು ವಿಶ್ವಾದ್ಯಂತ ಪ್ರಸರಿಸಿದರು. ಸ್ತ್ರೀಯರಿಗೆ ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ ನೀಡುವಲ್ಲಿ ಎದುರಾದ ಸಂದಿಗ್ಧತೆಯ ದಿನಗಳಲ್ಲಿ ಸ್ತ್ರೀ ಸಮಾನತೆ ಧ್ವನಿಯಾಗಿ ಅವರು ನಿರ್ವಹಿಸಿದ ರಚನಾತ್ಮಕ ಕಾರ್ಯಗಳು ಜಗತ್ತಿಗೆ ಆದರ್ಶನೀಯ ಎಂದು ಕೂಡಲ ಸಂಗಮ ಬಸವಧರ್ಮ ಪೀಠದ ಹಿರಿಯ ಧರ್ಮ ಪ್ರಚಾರಕಿ ಶರಣೆ ಶಾಂತಮ್ಮ ಶಿವಮೊಗ್ಗದಲ್ಲಿ ಹೇಳಿದ್ದಾರೆ.