ಗುಡ್ ಬೈ 2023, ವೆಲ್ ಕಮ್ 2024ಹೊಸ ವರ್ಷವನ್ನು ಶಿವಮೊಗ್ಗ ಜಿಲ್ಲೆ ಜನತೆ ಸಂಭ್ರಮದಿಂದ ಬರಮಾಡಿಕೊಂಡಿದ್ದು, ವರ್ಷಪೂರ್ತಿ ಬೇಸರ-ಕಾತರ, ನೋವು-ನಲುವಿನ ಜೊತೆ ಸಾಗಿದ ಜನರು ಭಾನುವಾರ ಇವೆಲ್ಲದಕ್ಕೂ ಸಣ್ಣ ವಿರಾಮ ಕೊಟ್ಟು, ಒಂದೊಳ್ಳೆಯ ಪಾರ್ಟಿಗೆ ಸಿದ್ಧವಾಗಿದ್ದರು. ಹೊಸ ವರ್ಷವನ್ನು ಫ್ರೆಂಡ್ಸ್, ಫ್ಯಾಮಿಲಿ ಜೊತೆ ಕಳೆದರೆ, ಅನೇಕರು ಕೆಲಸದ ಜೊತೆ ಹೊಸ ವರ್ಷವನ್ನು ಸಂಭ್ರಮಿಸಿದರು. ಇನ್ನೊಂದಿಷ್ಟು ಮಂದಿ ಪಾರ್ಟಿ ಮೂಡ್ಗೆ ಜಾರಿದ್ದರು.