ಬರೆದಂತೆ ಬದುಕು ಸಾಗಿಸಿದ ವಿಶ್ವಕವಿ ಕುವೆಂಪು: ಎಚ್.ಟಿ.ಕರಿಬಸಪ್ಪ ಅಭಿಮತರಾಷ್ಟ್ರಕವಿ, ವಿಶ್ವಮಾನವ ಕುವೆಂಪು ಬರೆದ ಕೃತಿಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಪರಿಗಣಿಸಿ, ಕೆಳಹಂತದ ವ್ಯಕ್ತಿಗಳನ್ನು ನಾಯಕನಾಗಿಸಿದ್ದಾರೆ. ಸಮಸಮಾಜದ ಹಾಗೂ ಸಾಮರಸ್ಯ ಬದುಕಿನ ಮಹತ್ವದ ಅರಿವನ್ನು ಕುವೆಂಪು ಅವರ ಸಾಹಿತ್ಯದಲ್ಲಿ ಕಾಣಬಹುದು ಎಂದು ಉಪನ್ಯಾಸಕ, ಲೇಖಕ ಎಚ್.ಟಿ. ಕರಿಬಸಪ್ಪ ಆನವಟ್ಟಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.