ಯುವನಿಧಿ ಸೌಲಭ್ಯಕ್ಕೆ ಅರ್ಹರು ಹೆಸರು ನೋಂದಾಯಿಸಿಕರ್ನಾಟಕ ರಾಜ್ಯದ ಪದವಿ, ಡಿಪ್ಲೊಮಾ ನಿರುದ್ಯೋಗಿಗಳು ಕೆಲಸ ಸಿಗಲಿಲ್ಲ, ಸಂಬಳ ಕಾಣಲಿಲ್ಲ ಎಂಬ ಕೊರಗು ಸ್ವಲ್ಪಮಟ್ಟಿಗೆ ನೀಗಿಸಲೆಂದು, ಅವರಿಗೆ ಸಹಾಯಹಸ್ತ ಚಾಚಲೆಂದು ನಿರುದ್ಯೋಗ ಭತ್ಯೆ ಘೋಷಿಸಿದೆ. ಈ ನೆರವು ಪಡೆಯಲು ಯುವನಿಧಿ ಯೋಜನೆಗೆ ಅರ್ಹರು ನೋಂದಣಿ ಮಾಡಿಕೊಳ್ಳುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೂಚಿಸಿದ್ದಾರೆ.