ಸ್ನಾನಗೃಹ, ಶೌಚಾಲಯವಿಲ್ಲ, ರೇಣುಕಾಂಬೆ ಭಕ್ತರ ಗೋಳು ಕೇಳೋರೂ ಇಲ್ಲ!?ಸೊರಬ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬೆ ದೇಗುಲ ಈ ಮೊದಲು ಬೆತ್ತಲೆ ಸೇವೆಯಿಂದ ರಾಜ್ಯಾದ್ಯಂತ ಸುದ್ದಿ ಮಾಡಿ, ಅನಿಷ್ಠ ಪದ್ಧತಿ ಕೊನೆಗಾಣಿಸಿಕೊಂಡ ಕೀರ್ತಿಗೆ ಭಾಜನವಾಗಿದೆ. ಆದರೆ, ಅದೇ ಧಾರ್ಮಿಕ ಕ್ಷೇತ್ರದಲ್ಲೀಗ ಭಕ್ತರು, ಪ್ರವಾಸಿಗರ ಮಾನ ಹರಾಜಾಗುತ್ತಿದೆ. ಇದಕ್ಕೆ ಕಾರಣ ಚಂದ್ರಗುತ್ತಿ ಗ್ರಾಮದಲ್ಲಿ ಸ್ವಚ್ಚತೆ ಕಡೆಗಣಿಸಲಾಗಿದೆ, ಮೂಲಸೌಕರ್ಯಗಳಲ್ಲಿ ಪ್ರಮುಖವಾದ ಶೌಚಾಲಯ, ಸ್ನಾನಗೃಹಗಳಿಲ್ಲದೇ ಭಕ್ತರು ಪರದಾಡುವಂತಾಗಿದೆ.