ಅರ್ಹರಿಗೆ ಶಾಸಕರೂ ಯುವನಿಧಿ ತಲುಪಿಸಬೇಕು: ಕಿಮ್ಮನೆ ರತ್ನಾಕರ್ಜ.12ರಂದು ಯುವನಿಧಿಗೆ ಅದ್ಧೂರಿ ಚಾಲನೆ ನೀಡಿ, ಯುವಮತಗಳ ಸೆಳೆಯುವ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಅಧಿಕವಾಗಿ ಶ್ರಮಿಸುತ್ತಿದ್ದಾರೆ. ರಾಜ್ಯ ಸೇರಿದಂತೆ, ಜಿಲ್ಲೆಯ ವಿವಿಧೆಡೆ ಶಾಸಕರು, ಸಚಿವರು, ಮಾಜಿ ಜನಪ್ರತಿನಿಧಿಗಳೆಲ್ಲ ಯುವನಿಧಿ ಜಪ ಮಾಡುತ್ತಿದ್ದಾರೆ. ತೀರ್ಥಹಳ್ಳಿಯಲ್ಲೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಮಾರಂಭಕ್ಕೆ ಫಲಾನುಭವಿಗಳನ್ನು ಕರೆ ತರಲು 2 ಸಾವಿರ ಬಸ್ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಅತಿ ಹೆಚ್ಚಿನ ಯುವಜನರು ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಅರ್ಹರನ್ನು ಕರೆತರಬೇಕು ಎಂದು ಮನವಿ ಮಾಡಿದ್ದಾರೆ.