27ರಂದು ಎಂಎಲ್ಸಿ ರುದ್ರೇಗೌಡರಿಗೆ ಅಭಿನಂದನಾ ಕಾರ್ಯಕ್ರಮಜಿಲ್ಲೆಯ ಹೆಸರಾಂತ ಉದ್ಯಮಿ, ವಿಧಾನಪರಿಷತ್ತು ಸದಸ್ಯ ಎಸ್. ರುದ್ರೇಗೌಡ ಅವರ ಸಾಧನೆ, ಸೇವೆ ಜನತೆ ಅರಿಯುವಂಥ ಅವಕಾಶಕ್ಕೆ ಕಾಲಕೂಡಿಬಂದಿದೆ. ರುದ್ರೇಗೌಡರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜ.27ರಂದು ಅಮೃತಮಯಿ ಶೀರ್ಷಿಕೆಯಡಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮ, ಎಸ್.ರುದ್ರೇಗೌಡ- ದಿ ಐರನ್ ಮ್ಯಾನ್ ಕೃತಿ ಬಿಡುಗಡೆಗೊಳ್ಳಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಡಿ.ಜಿ.ಬೆನಕಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.