ಮಹಿಳೆಯರ ಸ್ವಾವಲಂಬನೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಕಾರಿಯಾಗಿದೆಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಸಂಘಟನೆ ಜತೆಗೆ ಆತ್ಮವಿಶ್ವಾಸ ಬೆಳೆಯುತ್ತಿದೆ. ಜ್ಞಾನವಿಕಾಸ ಕೇಂದ್ರದ ಮೂಲಕ ಸದಸ್ಯರಿಗೆ ಪ್ರತಿ ತಿಂಗಳು ಆರೋಗ್ಯ, ಶಿಕ್ಷಣ, ಕಾನೂನು ಅರಿವು, ಮಕ್ಕಳ ಪಾಲನೆ ಪೋಷಣೆ, ಸಂಸ್ಕೃತಿ ಮತ್ತು ಸಂಸ್ಕಾರ, ಕುಟುಂಬ ನಿರ್ವಹಣೆ, ಸ್ವಉದ್ಯೋಗ ಮೊದಲಾದ ವಿಚಾರಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಲಾಗುತ್ತಿದೆ. ಈ ಮೂಲಕ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಧರ್ಮಸ್ಥಳ ಸಂಘ ಸಹಕಾರಿಯಾಗಿದೆ ಎಂದು ಸೊರಬ ತಾಲೂಕು ಭೈರೇಕೊಪ್ಪದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ ಹೇಳಿದ್ದಾರೆ.