ಗುಣಮಟ್ಟದ ಸಿನಿಮಾಗಳು ಇಂದಿನ ಪೀಳಿಗೆಗೆ ಅವಶ್ಯಕಸಿನಿಮಾಗಳು ಕೇವಲ ದೃಶ್ಯ ಕಥಾನಕಗಳಲ್ಲ. ಅವು ಜೀವನದ ಸಣ್ಣ ತುಣುಕುಗಳು. ದೃಶ್ಯ, ಧ್ವನಿ, ಸಂಗೀತ, ಪಾತ್ರ ಮತ್ತು ದೃಶ್ಯ ಸಜ್ಜಿಕೆಯ ಮೂಲಕ ನಿರ್ದೇಶಕ ಕಟ್ಟಿಕೊಡುವ ವಾಸ್ತವಿಕ ಜಗತ್ತು. ಈ ನಿಟ್ಟಿನಲ್ಲಿ ಪ್ರೇಕ್ಷಕರ ಅಭಿರುಚಿ ಬೆಳೆಸುವ ಮತ್ತು ಕಲಾತ್ಮಕತೆಯನ್ನು ಅನಾವರಣಗೊಳಿಸುವ ಜಾಗತಿಕ ಗುಣಮಟ್ಟದ ಸಿನಿಮಾಗಳು ಇಂದಿನ ಅಗತ್ಯ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.