ಫೆಬ್ರವರಿ 18ರಂದು ಉಡು-ತಡಿ ಪುಸ್ತಕ ಬಿಡುಗಡೆ, ನಾಟಕ ಪ್ರದರ್ಶನ: ಲೇಖಕ ಗಣೇಶ್ಮಲೆನಾಡು ಕಲಾ ತಂಡ ಶಿವಮೊಗ್ಗ, ದಿ. ಎಂ.ಕೆ. ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಇವರ ಸಂಯುಕ್ತಾಶ್ರಯದಲ್ಲಿ ಡಾ. ಗಣೇಶ್ ಆರ್ ಕೆಂಚನಾಲ್ ರಚನೆಯ ’ಉಡು -ತಡಿ’ ನಾಟಕದ ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನವನ್ನು ಫೆ.18 ರಂದು ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಲೇಖಕ, ರಂಗ ನಿರ್ದೇಶಕ ಗಣೇಶ್ ಆರ್. ಕೆಂಚನಾಲ್ ತಿಳಿಸಿದರು.