ದೇವಾಲಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ತಾಣಗಳು ದೇವಸ್ಥಾನ ಎನ್ನುವುದು ಪ್ರಾರ್ಥನಾಲಯ ಅಲ್ಲ. ಅದು ದೇವರ ಸಾನ್ನಿಧ್ಯ ಇರುವ ಜಾಗ. ಸಮಾಜಕ್ಕೆ ದೇವಾಲಯಗಳು ಮಾರ್ಗದರ್ಶನ ನೀಡುವ ತಾಣಗಳು. ನಮ್ಮ ಹಿಂದೂ ಧರ್ಮದಲ್ಲಿ ದೇವತಾ ಸಾನ್ನಿಧ್ಯ ಗಟ್ಟಿಯಾಗಲು ಮೂರ್ತಿ ಪ್ರತಿಷ್ಠಾಪಿಸಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಾಣಪ್ರತಿಷ್ಠೆ ನೆರವೇರಿಸಿ, 12 ವರ್ಷಗಳಿಗೊಮ್ಮೆ ಕುಂಬಾಭಿಷೇಕ ಇನ್ನಿತರ ಕಾರ್ಯಕ್ರಮಗಳನ್ನು ಮಾಡಿ, ವಿಶೇಷವಾದ ಪ್ರಾಣಶಕ್ತಿಯನ್ನು ನೀಡುತ್ತೇವೆ. ಅಲ್ಲಿ ದೇವತಾ ಸಾನ್ನಿಧ್ಯ ವೃದ್ಧಿ ಆಗುತ್ತಿರುತ್ತದೆ ಎಂದು ಕೂಡಲಿ ಕ್ಷೇತ್ರ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ನುಡಿದಿದ್ದಾರೆ.