• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವಿಐಎಸ್‌ಎಲ್ ಹೋರಾಟಕ್ಕೆ ಒಂದು ವರ್ಷ: ಸಂಸದರ ನಿವಾಸಕ್ಕೆ ಕಾರ್ಮಿಕರ ಬೈಕ್ ಜಾಥಾ
ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ತೀರ್ಮಾನದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆ ಸೋಮವಾರ ಶಿವಮೊಗ್ಗದಲ್ಲಿರುವ ಸಂಸದರ ನಿವಾಸದವರೆಗೆ ಬೈಕ್ ರ್‍ಯಾಲಿ ನಡೆಸಿದ್ದರು.
ಮಕರ ಸಂಕ್ರಾಂತಿ: ಶಿಕಾರಿಪುರದಲ್ಲಿ ಎಳ್ಳು-ಬೆಲ್ಲ ಹಂಚಿದ ಯಡಿಯೂರಪ್ಪ
ಮಕರ ಸಂಕ್ರಮಣ ಹಿನ್ನಲೆ ಸ್ವಕ್ಷೇತ್ರ ಶಿಕಾರಿಪುರಕ್ಕೆ ಧಾವಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಕಚೇರಿಯಲ್ಲಿ ಸ್ಥಳೀಯ ಹಾಗೂ ಪರಸ್ಥಳದ ನೂರಾರು ಕಾರ್ಯಕರ್ತರನ್ನು ಭೇಟಿಯಾದರು. ಸಂಜೆ ವೇಳೆಯಲ್ಲಿ ಆತ್ಮೀಯ, ಹಳೆಯ ಕಾರ್ಯಕರ್ತ ಹಾಗೂ ಆರೆಸ್ಸೆಸ್‌ ಹಿರಿಯ ಸ್ವಯಂಸೇವಕ ಹಾಗೂ ಕನ್ನಡಪ್ರಭ ವರದಿಗಾರರೂ ಆಗಿರುವ ಅಂಗಡಿ ರಾಮಣ್ಣ ಅವರನ್ನು ಭೇಟಿಯಾಗಿದರು. ಎಳ್ಳುಬೆಲ್ಲ ಹಂಚಿದ ಅವರು, ಅಭಿಮಾನಿಗಳ ಜತೆ ಫೋಟೋಗಳನ್ನು ತೆಗೆಸಿಕೊಂಡರು.
ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗೆ ಸದನದಲ್ಲಿ ದನಿಯೆತ್ತಿ
ಸರ್ಕಾರದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಏಳನೇ ವೇತನ ಆಯೋಗ ವರದಿ ಕೂಡಲೇ ಅಂಗೀಕರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ಶಿಕಾರಿಪುರದಲ್ಲಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಎಚ್.ಡಿ.ಮಧುಕೇಶವ ನೇತೃತ್ವದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಸೀದಿ ಒಡೆಯುತ್ತೇವೆಂದು ಅನಂತಕುಮಾರ್‌ ಹೇಳಿದ್ದರಲ್ಲಿ ತಪ್ಪೇನಿದೆ?: ಕೆಎಸ್‌ ಈಶ್ವರಪ್ಪ

ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ದೇವಸ್ಥಾನಗಳಾಗಿದ್ದವು. ಈ ಮಸೀದಿಗಳನ್ನು ಒಡೆಯುತ್ತೇವೆ ಎಂದು ಅನಂತ್‌ಕುಮಾರ್‌ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಸಮರ್ಥಿಸಿಕೊಂಡರು.

ದೇಗುಲ ಆವರಣ ಸ್ವಚ್ಛಗೊಳಿಸಿದ ಸಂಸದ, ಶಾಸಕರು
ರಾಷ್ಟ್ರವ್ಯಾಪಿ ದೇಗುಲ ಸ್ವಚ್ಛತಾ ಅಭಿಯಾನ ಹಿನ್ನೆಲೆ ಶಿವಮೊಗ್ಗ ನಗರದ ಹೊಳೆಹೊನ್ನೂರು ರಸ್ತೆ ರೈಲ್ವೆ ಗೇಟ್‌ ಪಕ್ಕದ ಅರಕೇಶ್ವರ ದೇಗುಲದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ ಪೊರಕೆ ಹಿಡಿದು ಕಸ ಗುಡಿಸಿದರು. ಅಲ್ಲದೇ, ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸಹ ರಾಮೇಶ್ವರ ದೇಗು ಮೆಟ್ಟಿಲುಗಳ ಸ್ವಚ್ಛಗೊಳಿಸಿದ್ದಾರೆ.
ರಾಮಾಯಣ ಕೇವಲ ಕಥೆ ಅಲ್ಲ, ಅದೊಂದು ಅನುಭವ
ಜಗತ್ತಿನಲ್ಲಿ ಸಾವಿರಾರು ರಾಮಾಯಣಗಳಿವೆ. ಪ್ರತಿಯೊಂದು ರಾಮನ ವ್ಯಕ್ತಿತ್ವವನ್ನು ಕೇಂದ್ರೀಕರಿಸಿದೆ. ಹಾಗಾಗಿ, ವಾಲ್ಮೀಕಿ ರಾಮಾಯಣ ಸೇರಿದಂತೆ ಜಗತ್ತಿನ ಸಾವಿರಾರು ರಾಮಾಯಣಗಳು ಕೇವಲ ಕಥೆ ಅಲ್ಲ. ಅದೊಂದು ಅನುಭವ. ರಾಮನ ವ್ಯಕ್ತಿತ್ವ ಸರಿಯಾದ ನಿಟ್ಟಿನಲ್ಲಿ ಅರ್ಥ ಮಾಡಿಕೊಳ್ಳಬೇಕಾದರೆ, ಹತ್ತುಹಲವು ಆಯಾಮಗಳಲ್ಲಿ ಚಿತ್ರಿತ ಆಗಿರುವ ರಾಮಾಯಣಗಳನ್ನು ಅಧ್ಯಯನ ಮಾಡಬೇಕು ಎಂದು ಮಲಯಾಳಂ ಸಾಹಿತಿ ಪುನಕ್ಕಲ್ ನಾರಾಯಣನ್ ಶಿವಮೊಗ್ಗದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಲಲಿತ ಕಲೆಗಳಿಂದ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ
ಸಂಗೀತ, ನೃತ್ಯದಂತಹ ಪ್ರಾಕಾರಗಳು ಮಾನಸಿಕ ವಿಕಸನದ ಜೊತೆಗೆ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಉದ್ಯಮಿ ಮಧುಕರ ನರಸಿಂಹ ಹೆಗಡೆ ಸಾಗರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕ್ರೈಸ್ತ ಪಾದ್ರಿಗಳಿಂದ ಕನ್ನಡಕ್ಕೆ ಅಮೋಘ ಕೊಡುಗೆ
ಕ್ರೈಸ್ತ ಪಾದ್ರಿಗಳು ಕನ್ನಡಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿ, ಕೊಡುಗೆ, ಕನ್ನಡದ ಆಧುನಿಕ ಪ್ರಜ್ಞೆಯನ್ನು ನಮ್ಮೆದುರಿಗೆ ಇಟ್ಟಿದ್ದಾರೆ. ಸಾಮ್ರಾಜ್ಯಶಾಹಿಯ ಭಾಗವಾಗಿ ಭಾರತಕ್ಕೆ ಬಂದ ರೆ.ಕಿಟೆಲ್ ಮುಂತಾದ ಕ್ರೈಸ್ತ ಪಾದ್ರಿಗಳು ಈ ನೆಲದ ಬಗ್ಗೆ ಮೋಹ ಬೆಳೆಸಿಕೊಂಡು ಇಲ್ಲಿನ ಭಾಷೆ, ಸಂಸ್ಕೃತಿ, ಜನಜೀವನ ಕುರಿತು ಇನ್ನಿಲ್ಲದಂತೆ ಕೆಲಸ ಮಾಡಿದ್ದಾರೆ. ಅವರು ಕನ್ನಡ ಭಾಷೆ ಮತ್ತು ವಿದ್ವತ್ತಿಗೆ ನೀಡಿದ ಕೊಡುಗೆ ಅನನ್ಯ, ಅಮೋಘವಾಗಿದೆ ಎಂದು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಸಾಗರ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
ಕೂಚ್‌ ಬೆಹಾರ್‌ ಫೈನಲ್‌: ಮುಂಬೈ ವಿರುದ್ಧ 626 ರನ್‌ ದಾಖಲಿಸಿದ ಕರ್ನಾಟಕ
ಶಿವಮೊಗ್ಗ ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ ಫೈನಲ್‌ ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ 626 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿ, 4ನೇ ದಿನಕ್ಕೆ ಆಟ ಮುಂದುವರಿಸಿದೆ. 3ನೇ ದಿನದಾಟದಲ್ಲಿ ಪ್ರಕರ್‌ ಚತುರ್ವೇದಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದು, ದ್ವಿಶತಕ ಸಿಡಿಸಿದ್ದಾರೆ.
ನಾಡಿನ ಮೇಲೆ ವನದೇವತೆ ಸಿಗಂದೂರುದೇವಿ ದಯೆ: ಶ್ರೀಗಳು
ಮಲೆನಾಡಿನ ವನದೇವತೆ ಸಿಗಂದೂರು ಚೌಡಮ್ಮದೇವಿ ನಾಡಿನ ಜನರನ್ನು ಪೊರೆಯುವ ಆರಾಧ್ಯ ದೇವಿಯಾಗಿದ್ದಾಳೆ. ಧರ್ಮ ರಕ್ಷಣೆಯೊಂದಿಗೆ ನಾಡಿನ ಶ್ರೇಯಸ್ಸಿಗೆ ದೇವಿ ಆಶೀರ್ವಾದ ಇರುತ್ತದೆ ಎಂದು ಕೇರಳದ ಶಿವಗಿರಿಯ ನಾರಾಯಣ ಗುರು ಪೀಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಸಿಗಂದೂರು ಜಾತ್ರೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
  • < previous
  • 1
  • ...
  • 435
  • 436
  • 437
  • 438
  • 439
  • 440
  • 441
  • 442
  • 443
  • ...
  • 516
  • next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved