ಏಡ್ಸ್ ಸೋಂಕಿತರ ಉನ್ನತ ಚಿಕಿತ್ಸೆಗೆ ಸರ್ಕಾರ ಆದ್ಯತೆಸಂವಿಧಾನದಡಿ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಹಜ ರೀತಿಯಲ್ಲಿ ಬದುಕುವ ಹಕ್ಕನ್ನು ಕರುಣಿಸಲಾಗಿದೆ. ಅಂತೆಯೇ, ಏಡ್ಸ್ ಸೋಂಕಿತರು, ಎಚ್‌ಐವಿ ಪೀಡಿತರು ಸೂಕ್ತ ಚಿಕಿತ್ಸೆ ಪಡೆಯಲು ಶ್ರಮಿಸಲಾಗುತ್ತಿದೆ. ಅವರು ನಿರ್ಭಯವಾಗಿ ಪರಿಪೂರ್ಣ ಜೀವನ ನಡೆಸಲು ಹೆಚ್ಚಿನ ಆದ್ಯತೆಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರ್.ಸಿ.ಎಚ್ ಕಾರ್ಯಕ್ರಮಾಧಿಕಾರಿ ಡಾ.ನಾಗರಾಜ ನಾಯ್ಕ ಶಿಕಾರಿಪುರದಲ್ಲಿ ಹೇಳಿದ್ದಾರೆ.