ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
shivamogga
shivamogga
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
12ರಂದು ಯುವನಿಧಿಗೆ ಸಿಎಂ ಚಾಲನೆ, ಯುವಸಮೂಹ ಪಾಲ್ಗೊಳ್ಳಲಿ: ಮಂಜುನಾಥಗೌಡ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಭರವಸೆ ಈಡೇರಿಸುವ ಉತ್ಸಾಹದಲ್ಲಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದಲ್ಲಿ ಜ.12ರಂದು ಸಿಎಂ ಯೋಜನೆಗೆ ಚಾಲನೆ ನೀಡಲಿದ್ದಾರೆ. ಯುವಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾಗರದಲ್ಲಿ ಕಾಂಗ್ರೆಸ್ ಮುಖಂಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ ಗೌಡ ಮನವಿ ಮಾಡಿದ್ದಾರೆ.
ಶಾಲೆಗಳು ದೇಶ ಭವಿಷ್ಯ ನಿರ್ಮಿಸುವ ವ್ಯಕ್ತಿ ನಿರ್ಮಾಣ ಕೇಂದ್ರವಾಗಲಿ: ಶಾಸಕ ಜ್ಞಾನೇಂದ್ರ
ಶಾಲೆಗಳು ಶಿಕ್ಷಣ ನೀಡಿ, ನೌಕರಿ ಸೃಷ್ಟಿಸುವ ಕಾರ್ಖಾನೆಗಳಾಗದೇ, ದೇಶದ ಭವಿಷ್ಯವನ್ನು ನಿರ್ಮಿಸುವ ವ್ಯಕ್ತಿ ನಿರ್ಮಾಣದ ಕೇಂದ್ರಗಳಾಗಬೇಕು, ನೈತಿಕತೆ, ಮಾನವೀಯ ಮೌಲ್ಯ ಮೂಡಿಸುವ ಹೊಣೆಗಾರಿಕೆ ಶಿಕ್ಷಕರು ಹೊಂದಿರಬೇಕು ಎಂದು ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರಾಮ, ಕೃಷ್ಣರ ಜಪ ನಡೆಯಲ್ಲ
ದೇಶದಲ್ಲಿ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಈಗ ನಿದ್ದೆಯಿಂದ ಮೇಲೆದ್ದಿರುವ ಬಿಜೆಪಿಗರು ರಾಮ, ಕೃಷ್ಣರ ಜಪ ಮಾಡುತ್ತಿದ್ದಾರೆ. ಇಂಥ ಅಧ್ಯಾತ್ಮ ಗಿಮಿಕ್‌ಗಳು ನಡೆಯುವುದಿಲ್ಲ. ಈ ಕಾಲಕ್ಕೆ ಏನಿದ್ದರೂ ಅಭಿವೃದ್ಧಿಯ ಜಪ ಮಾತ್ರ ಗೆಲುವಿನ ಸಾಧನ ಎಂದು ಸಚಿವ ಮಧು ಬಂಗಾರಪ್ಪ ಸೊರಬದಲ್ಲಿ ಹೇಳಿದ್ದಾರೆ.
ಯುವಜನರೇ ಹಾನಿಕಾರಕ ವಸ್ತುಗಳ ಬಳಕೆ ಮಾಡದಿರಿ
ಪ್ರತಿಯೊಬ್ಬರಿಗೂ ಸದೃಢ ದೇಹ, ಸ್ವಚ್ಛ ಮನಸ್ಸು, ಉತ್ತಮ ಚಿಂತನೆಗಳು ಬಹುಮುಖ್ಯ. ಆದರೆ, ಕೆಲವರು ಅತಿ ಕಡಿಮೆ ಸಮಯದಲ್ಲಿ ದೇಹದ ಶಕ್ತಿ, ಸಾಮರ್ಥ್ಯ ಹಾಗೂ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಾನಿಕಾರಕ ವಸ್ತುಗಳ ಬಳಕೆ ಮಾಡಬೇಡಿ ಎಂದು ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ. ವಿರೂಪಾಕ್ಷ ಹೇಳಿದ್ದಾರೆ.
ಸದಸ್ಯರೇ ಅಲ್ಲದವರಿಗೆ ನಿವೇಶನ: 16ರಿಂದ ಅಹವಾಲು ಸ್ವೀಕಾರ
ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 2006 ರಿಂದ 2014 ರವರೆಗೆ ನಿವೇಶನಗಳನ್ನು ಸದಸ್ಯರಲ್ಲದವರಿಗೆ ಮಾರಾಟ ಮಾಡಲಾಗಿದೆ. ಈ ಅಕ್ರಮದ ವಿಚಾರಣೆ ನಡೆದು 74 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವಾಗಿದೆ. ಈ ಹಿನ್ನೆಲೆ ಜ.16 ರಿಂದ 19ರವರೆಗೆ 4 ದಿನಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಭದ್ರಾವತಿಯಲ್ಲಿ ಹೇಳಿದ್ದಾರೆ.
ಬೈಕ್ ವ್ಹೀಲಿಂಗ್ ಮಾಡಿದ್ದ ಯುವಕನಿಗೆ 15,500 ರು. ದಂಡ
ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿ, ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿದ್ದ ಯುವಕನಿಗೆ ಕೋರ್ಟ್ ₹15,500 ದಂಡ ವಿಧಿಸಿದೆ. ಅಲ್ಲದೇ, ಆತನ ಸಾಹಸಕ್ಕೆ ಸಹಕರಿಸಿ, ವಿಡಿಯೋ ಚಿತ್ರೀಕರಣ ಮಾಡಿದ್ದಾತನಿಗೂ ₹5000 ದಂಡ ವಿಧಿಸಿ, ಆದೇಶ ನೀಡಿದೆ.
ಜಯಪ್ಪ ಹೆಸರಲ್ಲೇ ಬಯಲು ರಂಗಮಂದಿರ: ಸಚಿವ ಅಭಯ
ಒಂದು ಶಾಲೆ ಬೆಳೆಯುವಲ್ಲಿ ಶಿಕ್ಷಕರು, ಮುಖ್ಯಶಿಕ್ಷಕರ ಪಾತ್ರ ಹಿರಿದಾಗಿರುತ್ತದೆ. ಅಂಥ ಶಿಕ್ಷಕರಿಗೆ ಗೌರವ ಕೊಡುವುದು ಎಲ್ಲರ ಕರ್ತವ್ಯ. ನನಗೆ ಯಾರನ್ನು ದ್ವೇಷ ಮಾಡುವ ಅಭ್ಯಾಸವಿಲ್ಲ. ಚನ್ನಾಗಿದ್ದ ರಂಗಮಂದಿರವನ್ನು ಹೊಸದಾಗಿ ಕಟ್ಟುತ್ತೇವೆ ಎಂದು ಸುಳ್ಳು ಹೇಳಿ ಕೆಡುವಿದ್ದನ್ನು ದ್ವೇಷ ಮಾಡುತ್ತೇನೆ. ಆದಷ್ಟು ಬೇಗ ದೊಡ್ಡ ಪ್ರಮಾಣದಲ್ಲಿ ನಿವೃತ್ತ ಪ್ರಾಂಶುಪಾಲ ಎಚ್.ಜಯಪ್ಪ ಅವರ ಹೆಸರಲ್ಲೇ ಬಯಲು ರಂಗಮಂದಿರ ಕಟ್ಟುತ್ತೇವೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಆನವಟ್ಟಿ ಸಮಾರಂಭದಲ್ಲಿ ಭರವಸೆ ನೀಡಿದ್ಧಾರೆ.
ರೋಟರಿ ಮಾಜಿ ಅಧ್ಯಕ್ಷರು ಅನುಭವವನ್ನು ಅಮೃತವಾಗಿಸಲಿ
ರೋಟರಿ ಕ್ಲಬ್ ಸಮಾಜ ಸೇವೆಯಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದೆ. ಎಲ್ಲ ಕ್ಷೇತ್ರಗಳ ಸೇವಾ ಕಾಳಜಿ ಜನರ ಹೊಂದಿರುವ ಸಂಸ್ಥೆ. ಆದ್ದರಿಂದ ರೋಟರಿ ಕ್ಲಬ್ ಅಧ್ಯಕ್ಷರು ತಮ್ಮ ಒಂದು ವರ್ಷದ ಆಡಳಿತದ ಅವಧಿಯ ಅನುಭವವನ್ನು ಅಮೃತದಂತೆ ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು ಎಂದು ರೋಟರಿ ಜಿಲ್ಲೆ 3170ದ ಮಾಜಿ ಗವರ್ನರ್ ಡಾ. ಪ್ರಾಣೇಶ್ ಜಾಗೀರ್ ದಾರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಆರ್ಥಿಕ ಭವಿಷ್ಯ ಭದ್ರತೆ ಯುವನಿಧಿ ಉದ್ದೇಶ: ಸಂಗಮೇಶ್ವರ್
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಜ.12ರಂದು ಶಿವಮೊಗ್ಗದಲ್ಲಿ ಮಹತ್ವಾಂಕಾಕ್ಷೆಯ ಯುವನಿಧಿ ಯೋಜನೆ ಜಾರಿಯಾಗುತ್ತಿದೆ. ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ ಎಂದು ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಆಶೀರ್ವಾದಿಸಲು ಬನ್ನಿ: ಪ್ರಸನ್ನಕುಮಾರ್
ಕಾಂಗ್ರೆಸ್ ಸರ್ಕಾರವು ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ 4 ಗ್ಯಾರಂಟಿಗಳು ಈಡೇರಿ, ಜನತೆ ಅವುಗಳ ಪ್ರಯೋಜನ ಪಡೆಯುತ್ತಿದ್ದಾರೆ. ಈಗ 5ನೇ ಗ್ಯಾರಂಟಿ ಯುವನಿಧಿಗೆ ಜ.12ರಂದು ಶಿವಮೊಗ್ಗದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಜನತೆ ಇನ್ನಷ್ಟು ಹೆಚ್ಚಿನ ಆಶೀರ್ವಾದ ಮಾಡಲು ತಪ್ಪದೇ ಬನ್ನಿ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಪ್ರಸನ್ನಕುಮಾರ್ ಶಿಕಾರಿಪುರದಲ್ಲಿ ಹೇಳಿದ್ದಾರೆ.
< previous
1
...
440
441
442
443
444
445
446
447
448
...
516
next >
Top Stories
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯು ಪರೀಕ್ಷೆ - 1ರ ವೇಳಾಪಟ್ಟಿ
ಮತಗಳ್ಳತನ: ಚು.ಆಯುಕ್ತರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
ಗಡಿನಾಡಿನಲ್ಲಿ ಖಾಸಾಮಠದಿಂದ ಕನ್ನಡ ಕೈಂಕರ್ಯ
ಸೇನೆಯಲ್ಲಿ ಶಿಫಾರಸು ನಡೆಯಲ್ಲ - ರಾಗಾ ಹೇಳಿಕೆ ಬಾಲಿಶ