• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಅಡಕೆ ಯಂತ್ರಕ್ಕೆ ಪ್ರತ್ಯೇಕ ಮೀಟರ್‌ ಆದೇಶ ಪಾಲಿಸಬೇಡಿ
ಕೆಇಆರ್‍ಸಿ ಪ್ರಾರಂಭವಾದಾಗಿನಿಂದ ವಿದ್ಯುತ್ ಇಲಾಖೆಗೆ ಸಂಭಂದಿಸಿ ಕಾಯ್ದೆ ಬಿಗಿಯಾಗುತ್ತಿದೆ. ಕೆಇಆರ್‍ಸಿ ಸ್ವಾಯತ್ತ ಸಂಸ್ಥೆಯಾಗಿದ್ದರೂ ಕಾಯ್ದೆಗಳನ್ನು ನಿಯಂತ್ರಿಸುವ ಅಧಿಕಾರ ಆಡಳಿತ ನಡೆಸುವ ಸರ್ಕಾರಕ್ಕಿದೆ. ಒಂದೊಮ್ಮೆ ಕಾಯ್ದೆ ಜನಪರವಾಗಿಲ್ಲದ ಪಕ್ಷದಲ್ಲಿ ಬದಲಾಯಿಸುವ ಅಧಿಕಾರವೂ ಸರ್ಕಾರಕ್ಕಿದೆ. ಡಿಕೆಶಿ ಮೇಲಿನ ತನಿಖಾ ಪ್ರಕರಣಕ್ಕೆ ಸಂಬಂಧಿಸಿ ಆದೇಶವನ್ನು ಹಿಂಪಡೆಯಲಿಲ್ಲವೇ ಎಂದೂ ಟೀಕಿಸಿದರು.
ಗ್ರಾಮ ಅಭಿವೃದ್ಧಿಯೇ ಎಲ್ಲ ಗ್ರಾಮಸ್ಥರ ಗುರಿ ಆಗಿರಬೇಕು
ಪ್ರತಿ ವರ್ಷ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದರೂ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಸಾಧ್ಯವಾಗುತ್ತಿಲ್ಲ. ಗ್ರಾಮಗಳಲ್ಲಿ ಮದ್ಯಪಾನಿಗಳ ಸಂಖ್ಯೆ ಅಧಿಕವಾಗುತ್ತಿದೆ. ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತ ತಂದೆ ತಾಯಿ ಮಾತನ್ನು ಆಲಿಸದ ಮಕ್ಕಳು ಸಮಾಜಕ್ಕೆ ಕಂಟಕ ಆಗುತ್ತಿದ್ದಾರೆ. ಇದಕ್ಕೆ ಸಂಸ್ಕಾರಯುತ ಬುದ್ಧಿಮತ್ತತೆಯ ಕೊರತೆಯೇ ಕಾರಣವಾಗಿದೆ. ಉತ್ತಮ ಸಂಸ್ಕಾರ ನೀಡುವ ಮೂಲಕ ಎಲ್ಲರೂ ಗ್ರಾಮವನ್ನು ಆದರ್ಶ ಗ್ರಾಮವಾಗಿಸಲು ಸಂಕಲ್ಪ ಮಾಡಬೇಕಿದೆ ಎಂದರು.
ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ಮೆರಿಟ್ ಸೀಟುಗಳು ಭರ್ತಿ
ಶುಲ್ಕ ಭರಿಸಲು ಸಕಲ ವ್ಯವಸ್ಥೆ: ಪ್ರವೇಶಾತಿ ಪಡೆದ ಕೋರ್ಸುಗಳ ದಾಖಲಾತಿ ನಿರ್ವಹಣೆ ಹಾಗೂ ಶುಲ್ಕವನ್ನು ಭರಿಸಲು ವಿದ್ಯಾರ್ಥಿಗಳಿಗೆ ಸುಲಭ ಮಾದರಿಗಳಲ್ಲಿ ಅವಕಾಶಗಳನ್ನು ನೀಡಲಾಗಿತ್ತು. ಆಫ್‍ಲೈನ್‍ನಲ್ಲಿ ಶುಲ್ಕ ಭರಿಸುವವರ ಸಂಖ್ಯೆ ಹೆಚ್ಚಾದಂತೆ ಬ್ಯಾಂಕಿನಲ್ಲಿ ಹೆಚ್ಚುವರಿಯಾಗಿ ಮೂರು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಜೊತೆಗೆ ಬಸವ ಸಭಾಭವನ ಹಾಗೂ ಜೀವವಿಜ್ಞಾನ ಸಮುಚ್ಛಯದಲ್ಲಿ ಕೌಂಟರ್‌ಗಳನ್ನು ತೆರೆದು ಶುಲ್ಕ ಭರಿಸುವ ಪ್ರಕ್ರಿಯೆ ಸುಲಲಿತಗೊಳಿಸಲಾಯಿತು.
ಪೂಜೆ, ಪುನಸ್ಕಾರದಲ್ಲಿ ದೀವರ ಸಮಾಜ ಹಿಂದುಳಿದಿದೆ
ತೆಂಗಿನಕಾಯಿ ದೇವರ ತಲೆ, ವೀಳ್ಯವನು ಮೂರು ಎಲೆ ಇಡಬೇಕು. ದೇವ ಸಂಕೇತವಾಗಿದೆ, ದೇವರ ಆರಾಧನೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಮಂತ್ರ ಬಾರದ ಕಾರಣ ಮೂರು ಬಾರಿ ಅಕ್ಷತೆ ಹಾಕಿ ದೇವಿಯನ್ನು ಆಹ್ವಾನಿಸಲಾಗುತ್ತದೆ. ಹೀಗೆ ಲಕ್ಷ್ಮೀಪೂಜೆ ಮಾಡಲಾಗುತ್ತದೆ. ನಿಟ್ಟೂರ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಸಂಸ್ಕೃತಿ ಉಳಿಯಬೇಕಿದೆ ಮತ್ತು ಬೆಳಸುವ ಮೂಲಕ ಪಾಲಿಸಿಕೊಂಡು ಹೋಗಬೇಕಿದೆ. ದೀವರ ಸಂಸ್ಕೃತಿ ನಮ್ಮ‌ಪೀಳಿಗೆಗೆ ಧಾರೆ ಎರೆಯುವ ಕೆಲಸವಾಗಲಿ ಎಂದು ಆಶಿಸಿದರು.
ಗೊಂದಿ-ಸಾಬಾರ ಗ್ರಾಮಗಳ ಮಧ್ಯೆ ಕಬ್ಬಿನ ಗದ್ದೆಯಲ್ಲಿ ಆನೆಗಳ ಹಿಂಡು
ಗೊಂದಿ-ಸಾಬಾರ ಗ್ರಾಮಗಳ ಮಧ್ಯೆ ಕಬ್ಬಿನ ಗದ್ದೆಯಲ್ಲಿ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿರುವ ಆನೆಗಳಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಕಾರಣದಿಂದ ಹೊಲ-ಗದ್ದೆಗಳಿಗೆ ಗ್ರಾಮಸ್ಥರು ತೆರಳದಂತೆ ಮನವಿ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗದ್ದೆಯಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕನ್ನಡ ಅನ್ನದ ಭಾಷೆಯಾಗಿ ಪರಿವರ್ತನೆಗೊಳ್ಳಬೇಕು: ಜ್ಞಾನೇಂದ್ರ
ಭಾಷೆ ಉಳಿವಿಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಯಬೇಕಿದೆ. ಪ್ರಮುಖವಾಗಿ ಕನ್ನಡಿಗರ ಯೋಗದಾನದ ಅಗತ್ಯವಿದೆ. ಸಾಹಿತಿಗಳಿಂದ ಲಾಗಾಯ್ತಿನಿಂದಲೂ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಪರಭಾಷೆಯವರ ದಾಳಿಯಿಂದ ಇನ್ನೇನು ಭಾಷೆಯ ಅವಸಾನವಾಯ್ತೇನೋ ಎಂಬ ಹಂತದಲ್ಲಿ ಕರವೇ ಮುಂತಾದ ಕನ್ನಡ ಪರ ಸಂಘಟನೆಗಳಿಂದ ಕನ್ನಡಪರ ಹೋರಾಟಗಳು ನಡೆದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದರು.
ಆರ್.ಅಶೋಕ್ ಕುರ್ಚಿ ಗಟ್ಟಿ ಮಾಡಿಕೊಳ್ಳಲಿ: ಆಯನೂರು
ಅಶೋಕ್‌ಗೆ ಬೆಂಗಳೂರು ಹೊರತುಪಡಿಸಿ, ಬೆಳಗಾವಿ ಹಾಗೂ ಇತರ ಜಿಲ್ಲೆಗಳ ಪರಿಚಯ ಇಲ್ಲ. ಆರ್.ಅಶೋಕ್ ಮೊದಲು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವುದರ ಬಗ್ಗೆ ಗಮನಹರಿಸಲಿ, ಬಿಜೆಪಿ ಅಧಿಕಾರ ಅವಧಿಯಲ್ಲಿ ಪೂರ್ತಿ ಮಂತ್ರಿಮಂಡಲವನ್ನೇ ಹೆಚ್ಚಿಸಲು ಇವರಿಂದ ಸಾಧ್ಯವಾಗಲಿಲ್ಲ. ಬಿಜೆಪಿ ನಾಯಕರು ಪರಸ್ಪರ ಘೋಷಣೆ ಮಾಡುತ್ತ ಸಿಎಂ ಕುರ್ಚಿ ₹2000 ಕೋಟಿಗೆ ಮಾರಾಟಕ್ಕಿದೆ ಎನ್ನುತ್ತಿದ್ದರು. ಅಂತಹ ಪ್ರಸಿದ್ಧ ವಾತಾವರಣದಲ್ಲಿ ಬಿಜೆಪಿ ಸರ್ಕಾರವಿತ್ತು. ಇಂಥಹ ಸ್ವಂತ ಅನುಭವವನ್ನು ಅಶೋಕ್ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಯಾವುದೇ ಘಟನೆಗಳು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿಲ್ಲ ಎಂದು ತಿರುಗೇಟು ನೀಡಿದರು.
ಜನಪದೀಯರಿಂದ ಸಂಸ್ಕಾರ ಜ್ಞಾನಾರ್ಜನೆ ಆಗಬೇಕು: ಅಪ್ಪಗೆರೆ ತಿಮ್ಮರಾಜು
ಮಲೆನಾಡು ಭಾಗ ಜನಪದದ ಜೊತೆ ಅವಿನಾವಭಾವ ಸಂಬಂಧ ಇರಿಸಿಕೊಂಡಿದೆ. ಮಲೆನಾಡು, ಕರಾವಳಿ, ಬಯಲುಸೀಮೆ ಸೇರಿದಂತೆ ನಮ್ಮ ಪ್ರದೇಶಗಳ ಸಂಸ್ಕೃತಿ ಬೇರೆಬೇರೆ ಇದ್ದರೂ ಮೂಲ ಆಶಯ ಜನಪದವನ್ನು ಉಳಿಸುವುದೇ ಆಗಿದೆ. ಜಾನಪದ ಕಲೆ ಮತ್ತು ಕಲಾವಿದರು ನೇಪಥ್ಯಕ್ಕೆ ಸರಿಯುವ ಆತಂಕ ಎದುರಿಸುತ್ತಿದ್ದಾರೆ. ನಮ್ಮ ಸಂಸ್ಕೃತಿಯ ಮೂಲ ಬೇರಾಗಿರುವ ಜಾನಪದ ಮತ್ತು ಅದನ್ನು ರಕ್ಷಿಸಿಕೊಂಡು ಬರುತ್ತಿರುವ ಕಲಾವಿದರನ್ನು ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು.
27ರಂದು ಬಸವೇಶ್ವರ ಬ್ಯಾಂಕ್‌ ಶತಮಾನೋತ್ಸವ: ಅಧ್ಯಕ್ಷ
ಬ್ಯಾಂಕಿನ ಷೇರುದಾರರಿಗೆ ನೀಡಲಿರುವ ಬೆಳ್ಳಿನಾಣ್ಯವನ್ನು ರಾಜ್ಯ ಸಹಕಾರಿ ಸಚಿವ ರಾಜಣ್ಣ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಬ್ಯಾಂಕಿನ ಗ್ರಾಹಕರ ಸೇವಾ ಕೇಂದ್ರವನ್ನು ಶಿಕಾರಿಪುರ ಕ್ಷೇತ್ರ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷ ಜಿ.ಟಿ. ದೇವೆಗೌಡ, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕ್ರೀಡಾ ಸಾಧನೆಗೆ ನಿರಂತರ ಪರಿಶ್ರಮ ಮುಖ್ಯ
ಸಹ್ಯಾದ್ರಿ ಸಹೋದಯ ಶಾಲಾ ಸಂಕಿರಣದ ಅಧ್ಯಕ್ಷ ನವಿನಾ ಪಯಾಸ್‌ ಮಾತನಾಡಿ, ಕ್ರೀಡೆಯ ಮೂಲಕ ಎಲ್ಲರೂ ಒಂದು ಗೂಡುವುದರ ಜೊತೆಗೆ ಪಠ್ಯಕ್ಕೆ ಮಾತ್ರ ಸೀಮಿತರಾಗದೇ ಕ್ರೀಡಾ ಸಾಧನೆಗಳನ್ನು ತಿಳಿಯಲು ಕ್ರೀಡಾಕೂಟಗಳು ಮುಖ್ಯವಾಗುತ್ತವೆ. ಇದರಿಂದ ಸಂಘಟನಾ ಕೌಶಲ್ಯ, ತಂಡ ಹಾಗೂ ಕ್ರೀಡಾ ಸ್ಫೂರ್ತಿ ಕ್ರೀಡಾಪಟುಗಳಲ್ಲಿ ಹೆಚ್ಚಾಗುತ್ತದೆ. ಎಂದರು.
  • < previous
  • 1
  • ...
  • 443
  • 444
  • 445
  • 446
  • 447
  • 448
  • 449
  • 450
  • 451
  • ...
  • 484
  • next >
Top Stories
ಬೆಂಗಳೂರು : ಪಿಜಿ, ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಗುಡ್ ನ್ಯೂಸ್
ಮಹಿಳಾ ಡಿಎಸ್ಪಿಗೆ ‘ಎಷ್ಟು ಧೈರ್ಯ’ ಎಂದ ಅಜಿತ್‌: ವಿವಾದ
ಭಾರತಕ್ಕೆ ಮತ್ತಷ್ಟು ರಕ್ಷಣಾ ಬಲ: 15 ವರ್ಷದ ನೀಲನಕ್ಷೆ ಸಿದ್ಧ
ಬಿ ಅಂದ್ರೆ ಬಿಹಾರ, ಬೀಡಿ : ಕೇರಳ ಕಾಂಗ್ರೆಸ್‌ ವಿವಾದ
ನಿವೃತ್ತಿಯಿಂದ ಹೊರಬಂದ ರಾಸ್‌ ಟೇಲರ್‌, ಆದರೆ ನ್ಯೂಜಿಲೆಂಡ್‌ ಪರ ಆಡಲ್ಲ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved