ಅಂಬೇಡ್ಕರ್ ನೀಡಿದ ಸಂವಿಧಾನವೇ ನಮ್ಮ ಉಸಿರು9ನೇ ತರಗತಿ ವಿದ್ಯಾರ್ಥಿನಿ ಇಂಚರ ಸಂವಿಧಾನದ ಮಹತ್ವ ಕುರಿತು ಮಾತನಾಡಿದರು. ಶಿಕ್ಷಕ ಜಿಯಾವುಲ್ಲಾ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಲೆ ಪ್ರಾಂಶುಪಾಲರಾದ ಶರ್ವಾಣಿ, ಸಂಯೋಜನಾಧಿಕಾರಿ ವಾಣಿ, ಸಹಶಿಕ್ಷಕರಾದ ಸಂಗೀತ, ಸುಜಾತ, ರಶ್ಮಿ, ನವೀನ್, ರಾಜು, ಗಿರೀಶ್ ಮತ್ತಿತರರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. 5ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆ ಹಾಡಿದರು. ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.