• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕುವೆಂಪು ವಿವಿ ಕುಲಪತಿ ನೇಮಕ ಕುರಿತು ರಾಜ್ಯಪಾಲರಿಗೆ ಪ್ರಸ್ತಾಪನೆ: ಎಂ.ಸಿ.ಸುಧಾಕರ್
ಕಾಂಗ್ರೆಸ್‌ ಸರ್ಕಾರ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕೆಎಎಸ್, ಐಎಎಸ್ ಅಧಿಕಾರಿ‌ಗಳನ್ನು ರಿಜಿಸ್ಟ್ರಾರ್ ಆಗಿಸುವ ಬದಲು ಐಎಎಸ್, ಕೆಎಎಸ್ ಅಧಿಕಾರಿಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಸರ್ಕಾರದಲ್ಲಿ ವಿ.ವಿ. ಪ್ರೊಫೆಸರ್‌ಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ವಿಭಿನ್ನವಾಗಿ ಯೋಚಿಸಿದೆ. ಕುವೆಂಪು ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಾತಿ ಕುರಿತು ರಾಜ್ಯಪಾಲರಿಗೆ ಪ್ರಸ್ತಾಪನೆ ಕಳುಹಿಸಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಶಿವಮೊಗ್ಗದಲ್ಲಿ ಬುಧವಾರ ಹೇಳಿದ್ದಾರೆ.
ಕನ್ನಡ ಸಾಹಿತ್ಯದಿಂದ ಕನ್ನಡಿಗರ ಆತ್ಮಾಭಿಮಾನ ರಕ್ಷಣೆ: ಮಾನ್ಯ
ಎರಡು ಸಾವಿರ ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಶ್ರೀಮಂತ ಕನ್ನಡ ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ. ಕನ್ನಡ ಸಾಹಿತ್ಯವು ಕನ್ನಡ ಭಾಷೆ ಬೆಳವಣಿಗೆಯ ಜೊತೆಗೆ ಕನ್ನಡಿಗರ ಆತ್ಮಾಭಿಮಾನ ರಕ್ಷಣೆ ಮಾಡಿಕೊಂಡು ಬಂದಿದೆ ಎಂದು ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನ್ಯ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭಾ ಸಮರ: ಕಾಂಗ್ರೆಸ್‌ಗೆ ಯುವನಿಧಿಯೇ ಪ್ರಮುಖ ಅಸ್ತ್ರ!
ಈ ಬಾರಿಯ ಸಂಸತ್‌ ಚುನಾವಣೆಯಲ್ಲಿ ಶತಾಯಗತಾಯ ಅಧಿಕ ಸ್ಥಾನಗಳಿಸಲು ಎಲ್ಲ ಪಕ್ಷಗಳಂತೆ ಕಾಂಗ್ರೆಸ್‌ ಸಹ ಹಿಂದೆಬಿದ್ದಿಲ್ಲ. ಅದರಲ್ಲೂ, ಕರ್ನಾಟಕವೇ ಇಡೀ ದೇಶದ ಕಾಂಗ್ರೆಸ್‌ಗೆ ಮಾದರಿಯಾಗಿರುವ ಸಾಧನೆ ತೋರಿದ್ದು, ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳ ಗಳಿಸಲು ಈಗ ಗ್ಯಾರಂಟಿ ಯೋಜನೆಗಳು ಬಹುದೊಡ್ಡ ಅಸ್ತ್ರಗಳಾಗಿ ಕಾಂಗ್ರೆಸ್‌ ಬಳಸಲು ಯೋಚಿಸುತ್ತಿದೆ. ಇದಕ್ಕೆ ತಕ್ಕಂತೆ ಅದ್ಧೂರಿ ಕಾರ್ಯಕ್ರಮಗಳ ಮೂಲಕ ಗ್ಯಾರಂಟಿಗಳ ಈಡೇರಿಸಿ, ಪ್ರಚಾರವನ್ನು ಪಡೆಯುತ್ತಿದೆ. ಈಗ 5ನೇ ಗ್ಯಾರಂಟಿ ಇಡೀ ಯುವಜನರ ಮತಗಳ ಸೆಳೆಯಲು ದೊಡ್ಡ ಅಸ್ತ್ರವಾಗಿದ್ದು, ಶಿವಮೊಗ್ಗದಲ್ಲಿ ಜ.12ರಂದು ಯುವನಿಧಿ ಯೋಜನೆಗೆ ಚಾಲನೆ ನೀಡಲು ಸಕಲ ಸಿದ್ಧತೆ ನಡೆದಿದೆ.
ಯುವನಿಧಿ ಯೋಜನೆ ಕಾರ್ಯಕ್ರಮ ಯಶಸ್ವಿಗೆ ಸಕಲ ಸಿದ್ಧತೆ ನಡೆಸಿ
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ತಾನು ಭರವಸೆ ನೀಡಿದಂತೆ ಐದೂ ಗ್ಯಾರಂಟಿಗಳನ್ನೂ ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದು, ಕಡೇಯ ಹಾಗೂ 5ನೇ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ ಶಿವಮೊಗ್ಗದಲ್ಲಿ ಅದ್ಧೂರಿ ಚಾಲನೆ ನೀಡಲು ಸಜ್ಜಾಗಿದೆ. ಬುಧವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಸಹ ಶಿವಮೊಗ್ಗದಲ್ಲಿ ಸಕಲ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಬ್ಬರು ಸಚಿವರು, ಶಾಸಕರಿದ್ದ ಕಾರ್‌ಗೆ ಮಧು ಬಂಗಾರಪ್ಪ ಡ್ರೈವರ್‌!
ಶಾಸಕ, ಸಚಿವ ಅಥವಾ ಇನ್ಯಾವುದೇ ಉನ್ನತ ಹುದ್ದೆಯಲ್ಲಿರುವ, ಜನಪ್ರಿಯ ವ್ಯಕ್ತಿಗಳು ಸಾಮಾನ್ಯರಂತೆ ಸಾರ್ವಜನಿಕವಾಗಿ ಮಾಡುವ ಸಣ್ಣ ತಪ್ಪು ಅಥವಾ ಸಣ್ಣ ವರ್ತನೆಯೂ ಜನರ ಕುತೂಹಲ ಸೆಳೆದು, ಚಿಂತನೆ- ಬದಲಾವಣೆಗೆ ಕಾರಣವಾಗುತ್ತವೆ ಎಂಬುದಕ್ಕೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸ್ವಂತ ಕಾರಿನಲ್ಲಿ ಇಬ್ಬರು ಸಚಿವರು, ಶಾಸಕರನ್ನು ಡಿಸಿ ಕಚೇರಿ ಸಭೆಗೆ ಬಂದಿದ್ದ ಸಂದರ್ಭ ಬುಧವಾರ ಸಾಕ್ಷಿಯಾಗಿದೆ.
ಸಿಎಂ ಸಾಹೇಬ್ರಿಗೆ ಕರೆದಿಲ್ಲ, ನಾವು ಶ್ರೀರಾಮನಿಗೆ ಇಲ್ಲಿಂದಲೇ ಕೈ ಮುಗಿತೀವಿ
ಬಹುದೊಡ್ಡ ಸಂಘರ್ಷಗಳ ಇತಿಹಾಸ ಹೊಂದಿರುವ ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ, ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಮಂತ್ರಿಸಿಲ್ಲ. ಇದರಿಂದ ಕಾಂಗ್ರೆಸ್‌ ಜನನಾಯಕರಲ್ಲಿ ಮುನಿಸು ಇಲ್ಲದಿಲ್ಲ. ಏಕೆಂದರೆ, ಶಿವಮೊಗ್ಗದಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, "ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಸಾಹೇಬ್ರಿಗೆ ಕರೆದಿಲ್ಲ ಎಂದರೆ ಬೇಡ. ನಾವು ಎಲ್ಲಿರುತ್ತೇವೆಯೋ, ಅಲ್ಲಿಂದಲೇ ಓ ರಾಮ ಕಾಪಾಡಪ್ಪ ಅಂತ ಕೈ ಮುಗಿತೀವಿ, ಅದರಲ್ಲಿ ತಪ್ಪೇನಿದೆ.. " ಎಂದು ಹೇಳಿರುವುದು ಈ ಮಾತು ಸಾಕ್ಷೀಕರಿಸುತ್ತಿದೆ.
ಉದ್ಯೋಗಕ್ಕೆ ನಿರುದ್ಯೋಗ ಭತ್ಯೆ ನೆರವಾಗಲಿ: ಮಧು
ರಾಜ್ಯದಲ್ಲಿ ಪದವಿ, ಡಿಪ್ಲೊಮಾ ಮುಗಿಸಿದವರಿಗೆ ಉದ್ಯೋಗ ಲಭಿಸುವವರೆಗೆ ಸರ್ಕಾರ ಆರ್ಥಿಕ ಸಮಸ್ಯೆಯನ್ನು ತಕ್ಕಮಟ್ಟಿಗಾದರೂ ಪರಿಹರಿಸಿ, ಸಹಾಯಹಸ್ತ ಚಾಚುವ ಸಲುವಾಗಿ 5ನೇ ಗ್ಯಾರಂಟಿಯಾಗಿ ಯುವನಿಧಿ ಯೋಜನೆ ರೂಪಿಸಿದೆ. ಜ.12ರಂದು ಶಿವಮೊಗ್ಗದಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ. ಯುವಜನತೆಗೆ ಆತಂಕ ಬೇಡ, ಸರ್ಕಾರ ನಿಮ್ಮ ಪರವಾಗಿದೆ ಎಂದು ಮಧು ಬಂಗಾರಪ್ಪ ಶಿವಮೊಗ್ಗದ ಪೂರ್ವಭಾವಿ ಸಭೆಯಲ್ಲಿ ಹೇಳಿದ್ದಾರೆ.
ಗ್ರಾಹಕ ಹಕ್ಕುಗಳ ಅರಿವು ಅಗತ್ಯ: ಅವಿನ್‌
ವ್ಯವಹಾರ ಜ್ಞಾನಕ್ಕೆ ವಿದ್ಯೆ ಬೇಕೇಬೇಕು ಎಂದೇನಿಲ್ಲ. ಆದರೆ, ಚತುರತೆ, ಬುದ್ಧಿವಂತಿಕೆ ಮಾತ್ರ ಬೇಕೇಬೇಕು. ತಾಯಿಯ ಹೊಟ್ಟೆಯಲ್ಲಿರುವ ಮಗುವಿನಿಂದ ಹಿಡಿದು ಶವ ಆಗುವವರೆಗೂ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಗ್ರಾಹಕರಾಗಿದ್ದೇವೆ ಎಂದು ಶಿವಮೊಗ್ಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಆರ್.ಅವಿನ್ ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ಸ್ವಚ್ಛತೆ ಹೊಣೆ ಯಾರದ್ದು?
ಸರ್ಕಾರಿ ಶಾಲೆ ಎಂದರೆ ಅಲ್ಲಿ ಅಗತ್ಯ ಮೂಲಸೌಕರ್ಯಗಳು ಇಲ್ಲ ಎಂದೇ ಅರ್ಥ ಎಂಬಂಥ ದುಸ್ಥಿತಿ ಕರ್ನಾಟಕ ರಾಜ್ಯದಲ್ಲಿ ಇರುವುದು ಸುಳ್ಳಲ್ಲ. ಪ್ರತಿನಿತ್ಯ ಪತ್ರಿಕೆ, ಟಿ.ವಿ.ಗಳಲ್ಲಿ ಸರ್ಕಾರಿ ಶಾಲೆಗಳ ಅಧೋಗತಿ ವರದಿಯಾಗುತ್ತಿದ್ದರೂ, ಸರ್ಕಾರದಿಂದ ಸಾಮೂಹಿಕವಾಗಿ ಸೌಲಭ್ಯಗಳ ಕೊರತೆ ನೀಗಿಸುವಲ್ಲಿ ಪ್ರಮುಖ ಕ್ರಮಗಳು ಆಗುತ್ತಿಲ್ಲ. ಈ ವಿಷಯಗಳ ಬಗ್ಗೆಯೇ ವಿದ್ಯಾರ್ಥಿಗಳಿಂದ ನಡೆದ ಮಕ್ಕಳ ಗ್ರಾಮಸಭೆಯಲ್ಲೂ ಪ್ರತಿಧ್ವನಿಸಿವೆ. ಸೊರಬ ತಾಲೂಕಿನ ಕಿಗ್ಗ ಗ್ರಾಮದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಜನನಾಯಕರು, ಅಧಿಕಾರಿಗಳಿಗೆ ಶಾಲಾ ಶೌಚಾಲಯ ವಿಷಯಗಳ ಕುರಿತು ಸಿಕ್ಕಾಪಟ್ಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.
ಇಂದು ಶಿಕಾರಿಪುರದಲ್ಲಿ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ
ವಿದ್ಯಾರ್ಥಿಗಳಲ್ಲಿ ಸಾಹಿತ್ಯಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಮ್ಮೇಳನಗಳು ಪರಿಣಾಮಕಾರಿಯಾಗಿದ್ದು, ಶಿಕಾರಿಪುರದಲ್ಲಿ ಜ.4ರಂದು ತಾಲೂಕುಮಟ್ಟದ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಾದ್ಯಕ್ಷರಾಗಿ ಬಹುಮುಖ ಪ್ರತಿಭೆ ಕು.ಹೇಮಾ ಬಣಕಾರ್ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್ ಹುಚ್ರಾಯಪ್ಪ ಹೇಳಿದ್ದಾರೆ.
  • < previous
  • 1
  • ...
  • 445
  • 446
  • 447
  • 448
  • 449
  • 450
  • 451
  • 452
  • 453
  • ...
  • 516
  • next >
Top Stories
ಗ್ಯಾರಂಟಿಯಿಂದ 4 ಜನರ ಕುಟುಂಬಕ್ಕೆ ಪ್ರತಿ ತಿಂಗಳು ₹10,000 ಪ್ರಯೋಜನ
ಕಬ್ಬಿನ ದರ ನಿಗದಿ ಮಾಡಲು ಸರ್ಕಾರಕ್ಕೆ ರೈತರ ಡೆಡ್‌ಲೈನ್‌
ನಾನಕ್‌ ಜನ್ಮಸ್ಥಳಕ್ಕೆ ಹಿಂದುಗಳ ಪ್ರವೇಶಕ್ಕೆ ಪಾಕ್‌ ನಕಾರ
ರಾಹುಲ್‌ ಜೊತೆ ಸಿಎಂ, ಡಿಸಿಎಂ ಭೇಟಿ ವಿಳಂಬ?
ಹರ್ಯಾಣದಲ್ಲಿ ಬ್ರೆಜಿಲ್‌ ಮಾಡೆಲ್‌ನಿಂದ ಮತ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved