ಇ-ಕೆವೈಸಿ ನೋಂದಣಿಗೆ ತುಂಗಭದ್ರಾ ಗ್ಯಾಸ್ ಏಜೆನ್ಸಿಗೆ ಗ್ರಾಹಕರ ಲಗ್ಗೆಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವದಂತಿಯಿಂದಾಗಿ ರಾಜ್ಯದ ವಿವಿಧೆಡೆ ಅಡುಗೆ ಅನಿಲ ಸಂಪರ್ಕ ಗ್ರಾಹಕರಿಗೆ ಇ-ಕೆವೈಸಿ ಎಂಬುದು ತಲೆನೋವಾಗಿ ಪರಿಣಮಿಸಿದೆ. ಕೋಲಾರ, ಬೆಂಗಳೂರು, ಶಿವಮೊಗ್ಗ, ಮಂಗಳೂರು ಬಳಿಕ ಹೊಳೆಹೊನ್ನೂರಲ್ಲೂ ಈಗ ಇ-ಕೆವೈಸಿಗಾಗಿ ಜನರು ಮುಂಜಾನೆಯ ಸವಿನಿದ್ದೆ ಬಿಟ್ಟು ಗ್ಯಾಸ್ ಏಜೆನ್ಸಿಗಳತ್ತ ದೌಡಾಯಿಸುವಂತಾಗಿದೆ.