• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹೆಜ್ಜೇನು ದಾಳಿಯಲ್ಲಿ ಗುಡ್ಡೇಕೊಪ್ಪ ವ್ಯಕ್ತಿ ಸಾವು
ಮನುಷ್ಯ ಎಷ್ಟೇ ಗಟ್ಟಿ, ಕಟ್ಟುಮಸ್ತಾಗಿದ್ದರೂ, ಸಣ್ಣ ಕಾರಣ ಅವನ ಪ್ರಾಣಹರಣಕ್ಕೆ ಕಾರಣ ಆಗಬಹುದು ಎಂಬುದಕ್ಕೆ ವ್ಯಕ್ತಿಯೊಬ್ಬರ ಸಾವು ಸಾಕ್ಷಿಯಾಗಿದೆ. ಸೊರಬ ತಾಲೂಕಿನ ಗುಡ್ಡೇಕೊಪ್ಪ ಗ್ರಾಮದ ಕೃಷಿಕ ಪಂಚಾಕ್ಷರಯ್ಯಗೆ ಶನಿವಾರ ಹೆಜ್ಜೇನು ಕಡಿದಿದ್ದು, ಅವರು ಮೃತಪಟ್ಟಿದ್ದಾರೆ.
ಶಾಲಾ ಶೌಚಾಲಯಗಳ ಸ್ವಚ್ಛತೆ ಸಮಸ್ಯೆಗೆ ಶಾಶ್ವತ ಪರಿಹಾರ
ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ದೊಡ್ಡ ಪಿಡುಗು. ಈ ಸಮಸ್ಯೆ ನಿವಾರಣೆಗೆ ಸರ್ಕಾರಗಳಿಂದ ಗಂಭೀರ ಚಿಂತನೆಯೂ ಆಗುತ್ತಿಲ್ಲ, ಕಾರ್ಯ ಯೋಜನೆಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ದೌರ್ಭಾಗ್ಯ ವಿದ್ಯಾರ್ಥಿಗಳಿಗೆ ಎಂದಿಗೂ ಬರಬಾರದು ಎಂದು ಶಿಕ್ಷಣ ಸಚಿವರು ಹೇಳಿದ್ದು, ಶಾಲಾ ಶೌಚಾಲಯಗಳ ಸ್ವಚ್ಚತೆ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದು ತೀರ್ಥಹಳ್ಳಿಯಲ್ಲಿ ಭರವಸೆ ನೀಡಿದ್ದಾರೆ.
ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ, ವಾಹನ, ನಗದು ಹಸ್ತಾಂತರ
ಸಾರ್ವಜನಿಕರ ರಕ್ಷಣೆಯನ್ನೇ ಉಸಿರಾಗಿಸಿಕೊಂಡ ಪೊಲೀಸ್‌ ಇಲಾಖೆ ಸಾಧನೆಗಳು ಒಂದಲ್ಲ, ಎರಡಲ್ಲ. ಪ್ರತಿನಿತ್ಯ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುವ ಅವರು ಜನರ ನೆಮ್ಮದಿಗೆ ಕಾರಣರಾಗಿದ್ದಾರೆ. ಕಳೆದುಹೋದ ವಸ್ತುಗಳನ್ನು ಹುಡುಕಿ, ಅರ್ಹ ಮಾಲೀಕರಿಗೆ ತಲುಪಿಸುವಲ್ಲಿ ಅವರ ಶ್ರಮ, ಸೇವೆ ಶ್ಲಾಘನೀಯ. ಶಿವಮೊಗ್ಗದಲ್ಲಿ ಸಹ ಶನಿವಾರ ಇಂಥ ಆಸ್ತಿ ಮರಳಿಸುವ ಪರೇಡ್‌ ಜಿಲ್ಲಾ ಎಸ್‌ಪಿ ಮಿಥುನ್‌ಕುಮಾರ್ ನೇತೃತ್ವ ನಡೆದಿದೆ.
ಕಾಂಗ್ರೆಸ್‌ನಿಂದ ಜನವಿರೋಧಿ ಆಡಳಿತ: ಕೆ.ಅಜ್ಜಪ್ಪ ಆರೋಪ
ರಾಜಕೀಯ ಪಕ್ಷಗಳು ಎಂದ ಮೇಲೆ ಆಡಳಿತದಲ್ಲಿ ಇರಲಿ, ಇಲ್ಲದಿರಲಿ. ಸಣ್ಣ ವಿಷಯಗಳೂ ಪ್ರಮುಖ ಎನಿಸಿ, ಆರೋಪ-ಪ್ರತ್ಯಾರೋಪಗಳ ಮೂಲಕ ಜನರಿಗೆ ಸುದ್ದಿ ಮುಟ್ಟುತ್ತವೆ. ಈಗ ಕಾಂಗ್ರೆಸ್‌ ಆಡಳಿತವಿದ್ದು, ಜೆಡಿಎಸ್‌ ಮುಖಂಡು ಜನವಿರೋಧಿ ಆಡಳಿತ ಎನ್ನುತ್ತಿದ್ದಾರೆ. ಸೊರಬ ಮುಖಂಡ ಕೆ.ಅಜ್ಜಪ್ಪ ಸಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಕ್ಕೆ ಬಂದಿಲ್ಲ ಆರೋಪಿಸಿದ್ದಾರೆ.
ಅನೇಕರ ಶ್ರಮದಿಂದಾಗಿ ಹಿಂದುಗಳ ಶತಮಾನ ಕನಸು ಸಾಕಾರ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಇತಿಹಾಸ ಹಿಂದೆ ನೂರಾರು ಜನರ ತ್ಯಾಗ, ಬಲಿದಾನ, ಸಾವಿರಾರು ಹೋರಾಟಗಳ ರಕ್ತಚರಿತ್ರೆ ಇದೆ. ಅಲ್ಲದೇ, ಶ್ರೀ ರಾಮ ಮಂದಿರ ಕನಸು ನನಸಾಗಲಿ ಎಂಬ ಕಾರಣಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಪ್ರಪಂಚದಾದ್ಯಂತ ಭಗವದ್ಗೀತೆಯ ಪ್ರಸಾರ ಮಾಡಿದರು. ಕೋಟಿ ಗೀತ ಲೇಖನ ಯಜ್ಞ ಆಂದೋಲನ ನಡೆಸುತ್ತಿದ್ದಾರೆ. ಹೀಗೆ ಅನೇಕರು ರಾಮ ಮಂದಿರದ ವಿಷಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರೆಲ್ಲರ ಶ್ರಮದಿಂದಾಗಿ ಇಂದು ಹಿಂದುಗಳ ಶತಮಾನದ ಕನಸು ಸಾಕಾರಗೊಳ್ಳುತ್ತಿದೆ ಎಂದು ಪುತ್ತಿಗೆ ಮಠದ ದಿವಾನರಾದ ಗೋಪಾಲಚಾರ್ ಹೇಳಿದ್ದಾರೆ.
ಇ-ಸ್ವತ್ತು ವಿಳಂಬ ಹಿನ್ನೆಲೆ ಪುರಸಭೆ ಬಳಿ ಪೆಟ್ರೋಲ್‌ ಸುರಿದುಕೊಂಡ ಯುವಕ!
ಸರ್ಕಾರಿ ಕೆಲಸ, ದೇವರ ಕೆಲಸ ಎಂಬ ಜನಪ್ರಿಯ ಮಾತೊಂದಿದೆ. ಆದರೆ, ಇದು ಅಧಿಕಾರಿ-ಸಿಬ್ಬಂದಿಗೆ ಗೊತ್ತಿದ್ದೂ, ಎಲ್ಲಿಯೂ ಕಡ್ಡಾಯವಾಗಿ ಜಾರಿಗೊಂಡಿಲ್ಲ ಅನ್ನೋದಕ್ಕೆ ಶಿಕಾರಿಪುರ ಪುರಸಭೆ ಬಳಿ ಯುವಕ ಮುನಿರತ್ನ ಎಂಬಾತ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಸಾಕ್ಷಿಯಾಗಿದೆ.
ನಾ.ಡಿಸೋಜರಿಂದ ಸಾರ್ವಕಾಲಿಕ ಗಟ್ಟಿತನದ ಸಾಹಿತ್ಯ ರಚನೆ
ಸಾಹಿತಿ, ಲೇಖಕ ತನ್ನ ದೇಶ, ಪರಿಸರದ ಸ್ಪಂದನೆ ಅಕ್ಷರ ಮೂಲಕ ಸ್ಪಂದಿಸುತ್ತಾನೆ. ಇಂಥ ಮಾತಿಗೆ ಸಾಗರದ ಹಿರಿಯ ಸಾಹಿತಿ ನಾ.ಡಿಸೋಜ ಸಾಧನೆ ಗಮನೀಯ. ದ್ವೀಪ ಕಾದಂಬರಿ ಮೂಲಕ ದೇಶದ ಗಮನ ಸೆಳೆದಿದ್ದ ಅವರು ಈಗ ಸಮಗ್ರ ಕಾದಂಬರಿಗಳ ಸಂಪುಟ ಆರು ಸಾವಿರ ಪುಟಗಳ ಕೃತಿ ಮೂಲಕ ಮತ್ತೆ ಸಾಹಿತ್ಯಪ್ರಿಯರ ಮನಸೆಳೆದಿದ್ದಾರೆ. ನಾಡೋಜ, ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಅವರು ನಾ.ಡಿಸೋಜ ಸರ್ವಕಾಲಕ್ಕೂ ಸಲ್ಲುವ ಗಟ್ಟಿತನದ ಸಾಹಿತಿ ಎಂದು ಸಮಾರಂಭದಲ್ಲಿ ಹೇಳಿರುವುದು ಗಮನೀಯ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅತ್ತ್ಯುತ್ತಮ ಸಾಧನೆ
ಚಂದ್ರಯಾನ-2ರ ಸೋಲಿನ ಹಿಂದೆಯೇ, ಚಂದ್ರಯಾನ-3 ಅಭೂತಪೂರ್ವ ಯಶಸ್ಸು ವಿಶ್ವದಲ್ಲಿ ಭಾರತವನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಿದಂತಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ‌‌ ಅತ್ತ್ಯುತ್ತಮ ಸಾಧನೆ ಮಾಡುತ್ತಿದ್ದು, ಬಾಹ್ಯಾಕಾಶ ಹಾಗೂ ತಂತ್ರಜ್ಞಾನದ ಪ್ರಯೋಜನ ಪ್ರತಿಯೊಬ್ಬರಿಗೂ ಲಭಿಸುತ್ತಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿ ಟಿ.ಎಸ್. ಶಿವಪ್ರಸಾದ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಸಿಹಿ, ಕಹಿ ನೆನಪುಗಳ ನೀಡಿ ಇತಿಹಾಸವಾದ 2023
ಮೂರು ವರ್ಷಗಳಿಂದ ಕೊರೋನಾ ಕಾಟದಿಂದ ತತ್ತರಿಸಿದ್ದ ಶಿವಮೊಗ್ಗ ಜಿಲ್ಲೆಯ ಜನತೆ- 2023 ನಿಟ್ಟುಸಿರು ಬಿಟ್ಟವರ್ಷ. ಹರ್ಷದ ಹೊನಲೇನೂ ಹರಿಯದಿದ್ದರೂ, ಕೊರೋನಾ ಕರಿನೆರಳಿನಿಂದ ಬಹುಮಟ್ಟಿಗೆ ಚೇತರಿಸಿಕೊಂಡ ನೆಮ್ಮದಿ ಮೂಡಿಸಿದ್ದೇನೂ ಸುಳ್ಳಲ್ಲ. ಈಗ 2023 ಕೊನೆಯಾಗಿದೆ, 2024 ಭರಪೂರ ಭರವಸೆ, ನಿರೀಕ್ಷೆ, ಹೊಸ ಕನಸುಗಳನ್ನು ಹೊತ್ತು ಜಗಕ್ಕೆ ಎಂಟ್ರಿಯಾಗಿದೆ.
ಸಂಚಾರಿ ನಿಯಮಗಳ ಪಾಲಿಸಿದರೆ ಅಪಘಾತ ಆಗೋದಿಲ್ಲ
ವಾಹನ ಚಾಲಕರು ಎಷ್ಟೇ ಎಚ್ಚರಿಕೆ ವಹಿಸುತ್ತಿದ್ದರೂ ಅಪಘಾತಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಸಂಚಾರಿ ಠಾಣೆ ಪೊಲೀಸರ ಮಾತು ಕೇಳಿ, ಅನುಸರಿಸಿದ್ದೇ ಆದಲ್ಲಿ ಅಪಘಾತಗಳಿಗೆ ಸಂಪೂರ್ಣ ಮುಕ್ತಿ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ, ಸಣ್ಣ ಕಾರಣಕ್ಕೆ ದೊಡ್ಡ ಅಪಘಾತವಾಗುವುದು ನಿತ್ಯ ನೋಡುವಂತಾಗಿದೆ. ಹೀಗಾಗಿ ಎಲ್ಲರೂ ಸಂಚಾರ ನಿಯಮಗಳ ಪಾಲಿಸಿ ಅಪಘಾತ ತಪ್ಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೊರಬದಲ್ಲಿ ಹೇಳಿದ್ದಾರೆ.
  • < previous
  • 1
  • ...
  • 448
  • 449
  • 450
  • 451
  • 452
  • 453
  • 454
  • 455
  • 456
  • ...
  • 516
  • next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved