ವಿವಿಧ ಬೇಡಿಕೆ ಈಡೇರಿಸುವಂತೆ ಶಿಕ್ಷಕರ ಸಂಘದಿಂದ ಮನವಿತಿಪಟೂರು: ಜಿಲ್ಲಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿಗಳು ಪ್ರಾರಂಭವಾಗಿದ್ದು, ಈ ಅವಧಿಯನ್ನು ಬೆಳಗ್ಗೆ ೧೦ಗಂಟೆಯಿಂದ ಸಂಜೆ ೫ಗಂಟೆಯವರೆಗೆ ನಿಗದಿಪಡಿಸಬೇಕು ಹಾಗೂ ಶಿಕ್ಷಕರಿಗೆ ವ್ಯವಸ್ಥಿತವಾಗಿ ಮಧ್ಯಾಹ್ನದ ಊಟದ ಇನ್ನಿತರ ವ್ಯವಸ್ಥೆ ಕಲ್ಪಿಸಿಕೊಡುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಪ್ರಭುಗೆ ಮನವಿ ಸಲ್ಲಿಸಲಾಯಿತು.