ತಂಡಗದ ಪಿಎಸಿಎಸ್ ಅಧ್ಯಕ್ಷರಾಗಿ ಕೋಳಾಲ ಗಂಗಾಧರ್ ಆಯ್ಕೆತಾಲೂಕಿನ ತಂಡಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೋಳಾಲ ಗಂಗಾಧರ್, ಉಪಾಧ್ಯಕ್ಷರಾಗಿ ಚನ್ನಕೇಶವ ಆಯ್ಕೆಯಾದರು. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೊಡಗೀಹಳ್ಳಿ ಸಿದ್ದಲಿಂಗಪ್ಪನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಅವರ ವಿರೋಧಿ ತಂಡ ಗೆಲುವು ಸಾಧಿಸಿರುವುದು ಸಿದ್ದಲಿಂಗಪ್ಪನವರಿಗೆ ಮುಜುಗರ ತಂದಿದೆ.