ಸರ್ಕಾರಿ ಶಾಲೆಯಲ್ಲಿ ಶಿಸ್ತಿನಿಂದ ಕಲಿಯಲು ಸಾಧ್ಯ: ಸುರೇಶ್ಗೌಡದೇಶದ ಉನ್ನತ ಸ್ಥಾನದಲ್ಲಿರುವ ಅನೇಕ ಮಹನೀಯರು ಸರ್ಕಾರಿ ಶಾಲೆಯಲ್ಲೇ ಕಲಿತವರು. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶಿಸ್ತು, ಸಂಸ್ಕಾರ, ಆತ್ಮವಿಶ್ವಾಸ ಕಲಿಯುವ ಅವಕಾಶವಿದೆ. ಇಂತಹ ಸರ್ಕಾರಿ ಶಾಲೆಗಳ ಶ್ರೇಷ್ಠತೆ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.