ಸುಗಮ ಮತ ಎಣಿಕಾ ಕಾರ್ಯಕ್ಕೆ ಸಿದ್ಧತೆಜಿಲ್ಲೆಯಲ್ಲಿ ಕಳೆದ ಏಪ್ರಿಲ್ 26 ರಂದು ಜರುಗಿದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂನ್ ೪ರಂದು ಸುಗಮವಾಗಿ ಮತ ಎಣಿಕಾ ಕಾರ್ಯ ನಡೆಸಲು ಎಣಿಕಾ ಕೊಠಡಿ, ಎಣಿಕಾ ಟೇಬಲ್, ಅಗತ್ಯ ಅಧಿಕಾರಿ, ಸಿಬ್ಬಂದಿ ನಿಯೋಜನೆ ಸೇರಿದಂತೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.