ಜನವಿರೋಧಿ ಕಾನೂನು ರೂಪಿಸುತ್ತಿರುವ ಬಿಜೆಪಿ ಸೋಲಿಸಿ: ಕಾಂ.ಮೀನಾಕ್ಷಿ ಸುಂದರಂಲೋಕಸಭಾ ಚುನಾವಣೆಯಲ್ಲಿ ಸಂವಿಧಾನ, ಪ್ರಜಾಸತ್ತೆ, ಉಳಿಸಲು ಮತ್ತು ಸಮಾನತೆ -ಸಹಬಾಳ್ವೆ ಬೆಳಸಲು, ರೈತ, ಕಾರ್ಮಿಕರ , ಜನಸಾಮಾನ್ಯರ ಹಿತಕಾಯದೆ ಕಾಪೋರೇಟ್ ಲಾಭಕ್ಕೆ ಮಾರಾಟವಾದ ಮತ್ತು ದೇಶದ ಬಹುಪಾಲು ಕಾನೂನುಗಳನ್ನು ಜನ ವಿರೋಧಿಯಾಗಿ ತಿದ್ದುಪಡಿ ಮಾಡುತ್ತಿರುವ ಬಿಜೆಪಿ ಮತ್ತು ಅವರ ಮಿತ್ರ ಮಂಡಳಿಯನ್ನು ಸೋಲಿಸಲು ಮುಂದಾಗುವಂತೆ ಸಿಪಿಐ (ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಂ.ಮಿನಾಕ್ಷಿ ಸುಂದರಂ ಅವರು ಜನತೆಗೆ ಕರೆ ನೀಡಿದ್ದಾರೆ.