ಆಧ್ಯಾತ್ಮದ ಆಚರಣೆಯಿಂದ ದೇಶದ ಪ್ರಗತಿ ಸಾಧ್ಯ: ಸ್ವಾಮಿ ಜಪಾನಂದ ಶ್ರೀಆಧ್ಯಾತ್ಮ, ಅಕ್ಷರ, ಆರೋಗ್ಯ ಆಚರಣೆಯಲ್ಲಿದ್ದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ಮಹಾರಾಜ್ ಅಭಿಪ್ರಾಯಪಟ್ಟರು. ಮಧುಗಿರಿಯಲ್ಲಿ ಕುಡಿಯುವ ನೀರಿನ ಘಟಕ ಹಾಗೂ ದೂರ ತರಂಗ ಶಿಕ್ಷಣ ಯೋಜನೆ ಉದ್ಘಾಟಿಸಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.