ನಿಮ್ಮ ಕೆಲಸ ಮಾಡಿದ್ದೇನೆ, ನನಗೆ ಕೂಲಿ ಕೊಡಿ: ಡಿಕೆ ಸುರೇಶ್ಹಳ್ಳಿಗಳು, ರೈತರು, ಮಹಿಳೆಯರ ಅಭಿವೃದ್ಧಿಗೆ ಅಗತ್ಯ ಪ್ರಯತ್ನ ಮಾಡಿದ್ದೇನೆ. ನಾನು ಪಂಚಾಯ್ತಿ ಸದಸ್ಯನಂತೆ ನಿಮ್ಮ ಊರಿಗೆ ಬಂದು ನಿಮ್ಮ ಕಷ್ಟ ಆಲಿಸಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಆ ಮೂಲಕ ನಿಮ್ಮ ಕಷ್ಟ - ಸುಖಗಳಲ್ಲಿ ಭಾಗಿಯಾಗಿ ನಿಮ್ಮ ತಾಲೂಕಿನ ಮಗನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಕನ್ನಡಿಗರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ನೀವು ಸ್ವಾಭಿಮಾನದ ಮತವನ್ನು ನನಗೆ ಹಾಕಬೇಕು.