ಸ್ವಂತ ಖರ್ಚಿನಲ್ಲಿ ಹೂಳೆತ್ತಿಸಿ, ಪ್ರಾಣಿ ಪಕ್ಷಿಗಳಿಗೆ ಆಸರೆಯಾದ ಯುವಕರುಬರದಿಂದ ನೀರಿಲ್ಲದೆ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಲ್ಲದೆ ಪರದಾಡುವುದನ್ನು ಕಂಡು ದಿಬ್ಬೂರಿನ ಯುವಕರು, ಗ್ರಾಮದಲ್ಲಿ ಹೂಳು ತುಂಬಿ, ಒಣಗಿ ಹೋಗಿದ್ದ ಗೌಡರ ಕಟ್ಟೆಯ ಹೂಳೆತ್ತಿಸಿ, ನೀರು ತುಂಬಿಸುವ ಮೂಲಕ ಜಲಚರ, ಪ್ರಾಣಿ ಪಕ್ಷಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ.