ಶೇ.100 ಗುರಿ ಸಾಧನೆಗೆ ಮುಂದಾಗಿ: ಪರಂ ಸಲಹೆನ್ಯಾಕ್ನಿಂದ ‘ಎ ’ ಶ್ರೇಣಿ ಪಡೆದಿರುವ ಸಾಹೆ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಶೇ.70 ರಷ್ಟು ಪ್ರಾಧ್ಯಾಪಕರು ಸಂಶೋಧನೆಯಲ್ಲಿ ತೊಡಗಿದ್ದು, ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ ಮಾಡಲು ಶೇ. 100 ರಷ್ಟು ಗುರಿ ಸಾಧಿಸಲು ಮುಂದಾಗುವಂತೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದ ಪ್ರಾಧ್ಯಾಪಕರಿಗೆ ಸಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಗೃಹಸಚಿವ ಡಾ.ಜಿ. ಪರಮೇಶ್ವರ ಕರೆ ನೀಡಿದರು.