ಕುಂಚ ಪರಿವಾರ ಸಂಘದಲ್ಲಿ 20 ಕೋಟಿ ಠೇವಣಿಕುಂಚ ಪರಿವಾರ ಸಹಕಾರ ಸಂಘವು ೧೦೦ ಕೋಟಿ ರೂ. ಹೆಚ್ಚು ವಹಿವಾಟು ನಡೆಸಿ, ೨೦ ಕೋಟಿ ರು. ಠೇವಣಿ ಸಂಗ್ರಹಿಸಿರುವುದು ಸಾಮಾನ್ಯ ಸಂಗತಿಯಲ್ಲ. ೧೦ ವರ್ಷಗಳಲ್ಲಿ ಯಶಸ್ವಿಯಾಗಿ ಮುನ್ನಡೆದು ಈಗ ನೂತನ ಕಟ್ಟಡ ನಿರ್ಮಿಸಿರುವ ಸಂಘದ ಅಧ್ಯಕ್ಷ ಜಿ.ಆರ್.ರಂಗನಾಥ ಹಾಗೂ ಪದಾಧಿಕಾರಿಗಳ ಪ್ರಯತ್ನ ಶ್ಲಾಘನೀಯ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅಭಿಪ್ರಾಯ ಪಟ್ಟರು.