ಎಪಿಎಂಸಿಗೆ ಸ್ಥಳಾಂತರಗೊಂಡ ರಾಗಿ ಖರೀದಿ ಕೇಂದ್ರ ಎಪಿಎಂಸಿಯಲ್ಲಿ ಸಾಕಷ್ಟು ಸ್ಥಳದ ಅವಶ್ಯಕತೆ ಇದ್ದರೂ ರಾಗಿ ಖರೀದಿಯನ್ನು ನಗರದ ಬೇರೊಂದು ಬಾಡಿಗೆ ಸ್ಥಳದಲ್ಲಿ ರೈತರಿಂದ ಖರೀದಿಸುತ್ತಿರುವುದು ಅನುಮಾನ ಹುಟ್ಟಿಸಿದೆ ಎಂದು ಎಪಿಎಂಸಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ರಾಗಿ ಖರೀದಿ ಮಾತ್ರ ಬಾಡಿಗೆ ಸ್ಥಳದಲ್ಲಿ ಎಂಬ ಶೀರ್ಷಿಕೆಯಡಿ ಪತ್ರಿಕೆಗಳಲ್ಲಿ ವರದಿ ಬಿತ್ತರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೆ ರಾಗಿ ಖರೀದಿ ಕೇಂದ್ರವನ್ನು ಗುರುವಾರ ಎಪಿಎಂಸಿಗೆ ಸ್ಥಳಾಂತರಿಸಿದ್ದಾರೆ.