ನೀಲಕಂಠ ದೇವಳ ಜಾಗದಲ್ಲಿ ಕನ್ನಿಕಾ ಪ್ರತಿಷ್ಠಾಪನೆ?ನೀಲಕಂಠೇಶ್ವರಸ್ವಾಮಿ ದೇವಸ್ಥಾನ ವಿಚಾರವಾಗಿ ಕಾನೂನು ಹೋರಾಟ ಸಮಿತಿಯ ಎನ್.ರಾಮಾಂಜಿನಪ್ಪ ಸಲ್ಲಿಸಿದ್ದ ದೂರಿನ ಮೇರೆಗೆ ಪಟ್ಟಣದ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸ್ಥಳಕ್ಕೆ ಭೇಟಿ ನೀಡಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯ ದಾಖಲೆ ಅನ್ವಯ ಕ್ರಮ ಜರುಗಿಸಲಾಗುವುದು ತಹಸೀಲ್ದಾರ್ ವರದರಾಜ್ ಹೇಳಿದರು.