ಕಾಡು ಹಂದಿ ಬೇಟೆ: ಓರ್ವನ ಬಂಧನ 6ಜನ ಪರಾರಿ ಶೀಬಿ ಗಸ್ತಿನ ವ್ಯಾಪ್ತಿಯ ಕಳ್ಳಂಬೆಳ್ಳ ಹೋಬಳಿ ತಿಪ್ಪನಹಳ್ಳಿ ಗ್ರಾಮದ ಸರ್ವೇ ನಂ 89ರಲ್ಲಿ ಕಾಡು ಹಂದಿ ಸುಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ 4 ಕಾಡುಹಂದಿಗಳ ಮೃತದೇಹ ಹಾಗೂ ಒಂದು ಬೈಕ್, ಒಂದು ಸತ್ತರ್, ಒಂದು ಚೂರಿ ಹಾಗೂ ಮಾಂಸ ಕತ್ತರಿಸಲು ಬಳಸುವ 2 ಮರದ ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.