30 ಲಕ್ಷ ವೆಚ್ಚದಲ್ಲಿ ಗಣೇಶನಿಗೆ ಶಾಶ್ವತ ಶೆಡ್ ನಿರ್ಮಾಣ ಪಟ್ಟಣದಲ್ಲಿ ಎರೆಡು ಕಣ್ಣುಗಳಂತಿರುವ ಐತಿಹಾಸಿಕ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮತ್ತು ಶ್ರೀಪ್ರಸನ್ನ ಪಾರ್ವತಿ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಮಧ್ಯ ಭಾಗದಲ್ಲಿ ಪ್ರತಿ ವರ್ಷ ಗಣೇಶೋತ್ಸವ ಆಚರಿಸಲು 30 ಲಕ್ಷ ರು.ವೆಚ್ಚದಲ್ಲಿ ಶಾಶ್ವತ ಶೆಡ್ ನಿರ್ಮಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ತಿಳಿಸಿದರು.