ಬೀದಿನಾಯಿ ದಾಳಿಗೆ ಬಲಿಯಾದ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಹಣದ ಅನುದಾನದಡಿ ಬಾಲಕಿ ಕುಟುಂಬದ ತಂದೆ- ತಾಯಿಗೆ 5 ಲಕ್ಷ ರು. ಪರಿಹಾರ ನೀಡಲಾಗಿದೆ. ಕಡು ಬಡತನ ಹಾಗೂ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿರುವ ಇವರು, ಕಿವುಡ ಮತ್ತು ಮೂಕ ಪೋಷಕರಾಗಿದ್ದು, ಇವರಿಗೆ ಮತ್ತೊಬ್ಬ ಪುತ್ರಿಯಿದ್ದು ಅನುಕೂಲವಾಗಲೆಂದು ಪರಿಹಾರ ನೀಡಲಾಗಿದೆ.