ಜಾತಿಗಣತಿಯಲ್ಲಿ ಪಾರದರ್ಶಕತೆಗೆ ಸ್ಪಟಿಕಪುರಿ ಸ್ವಾಮೀಜಿ ಆಗ್ರಹಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹೆಚ್ಚಾಗಿದ್ದು, ಸರಕಾರ ಮರು ಜಾತಿಗಣತಿ ಮಾಡುವ ವೇಳೆ ವಸ್ತು ನಿಷ್ಠ, ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಜಾತಿಗಣತಿ ನಡೆಸಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಕ್ಷರಾದ ಶ್ರೀನಂಜಾಧೂತ ಸ್ವಾಮಿಜಿ ಹೇಳಿದರು.