ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡನಿವೃತ್ತ ಡಿವೈಎಸ್ಪಿ ಎಂ ಪಾಷಾ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಈ ಶಾಲೆಗಳಲ್ಲಿ ಓದಿದವರು ದೇಶ ಕಟ್ಟುವ ವಿಜ್ಞಾನಿಗಳು, ಕವಿಗಳು, ಎಂಜಿನಿಯರಗಳು, ಡಾಕ್ಟರ್ ಇನ್ನೂ ಹತ್ತಾರು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ರಾಷ್ಟ್ರದ ಗಮನ ಸಳೆದಿದ್ದಾರೆ. ಆದ್ದರಿಂದ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನಿವೃತ್ತ ಡಿ.ವೈಎಸ್‌ಪಿ ಎಂ.ಪಾಷಾ ಕರೆ ನೀಡಿದರು.