ಮುಂಡಗೋಡದ ಬಾಣಂತಿದೇವಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಜ. ೧೪ರಂದು ದೇವಿಯ ಸನ್ನಿಧಿಯಲ್ಲಿ ಹೋಮ, ಹವನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ. ಜ. ೧೫ರಂದು ದೇವಿಗೆ ಹಣ್ಣುಕಾಯಿ ಉಡಿ ಸೇವೆ, ಹರಕೆ ತೀರಿಸುವ ಕಾರ್ಯಕ್ರಮ ನೆರವೇರಲಿದ್ದು, ಅಂದು ಸಂಜೆ ೪ ಗಂಟೆಗೆ ಪಲ್ಲಕ್ಕಿ ಉತ್ಸವ ಬಳಿಕ ಬಾಣಂತಿ ದೇವಿಯ ತೆಪ್ಪೋತ್ಸವ ನಡೆಯಲಿದೆ.