ಸೀತಾರಾಮ ತಾಂಡಾದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮ ಹೆಸರಿನವರದ್ದೇ ಪಾರುಪತ್ಯ!ವಿಜಯನಗರ ಜಿಲ್ಲೆಯ ಸೀತಾರಾಮ ತಾಂಡಾದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮನ ಹೆಸರಿನವರೇ ಹೆಚ್ಚಿದ್ದಾರೆ. ಸೀತಾರಾಮ ತಾಂಡಾದಲ್ಲಿ 500ಕ್ಕೂ ಹೆಚ್ಚು ಮನೆಗಳಿದ್ದು, ಅಂದಾಜು 2000 ಜನಸಂಖ್ಯೆ ಇದೆ. ಈ ಊರಿನಲ್ಲಿ ಶೇ. 70ರಷ್ಟು ಜನರು ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಹೆಸರಿನವರು.