ಗಣೇಶ ಮಂಡಳಿಯಿಂದ ಲೋಕ ಕಲ್ಯಾಣಾರ್ಥ ನವಗ್ರಹ ಹೋಮವಿಜಯಪುರ: ಶ್ರೀ ಗಜಾನನ ಉತ್ಸವ ಮಹಾಮಂಡಳದ ವತಿಯಿಂದ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಪ್ರತಿಷ್ಠಾಸಿದ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಸ್ಥಳದಲ್ಲಿ ಬೆಳಗ್ಗೆ ಏಳು ಗಂಟೆಯಿಂದ 10 ಗಂಟೆಯ ವರೆಗೆ ಲೋಕ ಕಲ್ಯಾಣಾರ್ಥಕವಾಗಿ ಗಣ ಹೋಮ, ನವಗ್ರಹ ಹೋಮ, ನರಸಿಂಹ ಹೋಮ, ಸುದರ್ಶನ ಹೋಮ ನಡೆಸಲಾಯಿತು.