ಡೋಣಿ ನದಿ ಬೆಳೆಹಾನಿ ಪ್ರದೇಶಗಳಿಗೆ ತಹಶೀಲ್ದಾರ್ ಭೇಟಿಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಡೋಣಿ ನದಿ ಪ್ರವಾಹದಿಂದ ರೈತರಿಗೆ ಉಂಟಾಗಿರುವ ಬೆಳೆ ಹಾನಿ ಪರಿಹಾರ ಒದಗಿಸುವ ಸಂಬಂಧ ತಾಲೂಕಿನ ಡೋಣಿ ನದಿ ತೀರಿದ ವಿವಿಧ ಗ್ರಾಮಗಳಿಗೆ ತಹಸೀಲ್ದಾರ್ ಪ್ರಕಾಶ ಸಿಂದಗಿ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಸಾತಿಹಾಳ, ಯಾಳವಾರ, ಕೊಂಡಗೂಳಿ ಸೇರಿದಂತೆ ಹಲವು ಬೆಳೆ ಹಾನಿಯಾದ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.