ಪ್ರಾಮಾಣಿಕತೆ ಸಮಾಜದಲ್ಲಿ ಇನ್ನೂ ಬೆಲೆ ಇದೆಸಮಾಜದಲ್ಲಿ ಪ್ರಾಮಾಣಿಕ ಸೇವೆಗೆ, ದುಡಿಮೆಗೆ ಯಾವತ್ತು ಬೆಲೆ ಇರುತ್ತದೆ. ವೃತ್ತಿಗೆ ನಿವೃತ್ತಿ ಹೊರತು ಒಡನಾಟಕ್ಕೆ ಅಲ್ಲ, ಸದಾ ನಿಮ್ಮ ಸುಖದುಃಖದಲ್ಲಿ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹೆಚ್.ಎಸ್. ಜೈಕುಮಾರ ಹೇಳಿದರು.