ತಾಲೂಕಿನಾದ್ಯಂತ ಉತ್ತಮ ಮಳೆಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಹೀಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಪಟ್ಟಣದ ಹಿರಿಯರಾದ ಬಸವರಾಜ ಹಾರಿವಾಳ ಅವರನ್ನು ಮಾತನಾಡಿಸಿದಾಗ, ನಿನ್ನೆ ರಾತ್ರಿ ಸುರಿದ ರೋಹಿಣಿ ಮಳೆಯು ಉತ್ತಮವಾಗಿದೆ. ಇದು ಬಿತ್ತನೆ ಮಾಡಲು ಬೇಕಾದ ಮಳೆ ನೀಡಿದೆ. ಇಂದು ಜೂ.೭ ರಂದು ಮೃಗಾ ಮಳೆ ಕೂಡುತ್ತದೆ. ಗುರುವಾರ ಮಧ್ಯಾಹ್ನವೂ ಪಟ್ಟಣ ಹೊರವಲಯದ ಸುತ್ತಮುತ್ತ ಮೃಗಾ ಮಳೆಯು ಆಗಿದೆ. ಇದರಿಂದಾಗಿ ಬಿತ್ತನೆ ಮಾಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು ಎಂದರು.