ಭಾರೀ ಮಳೆಗೆ ನೆಲಕಚ್ಚಿದ ಕಬ್ಬು, ದಾಳಿಂಬೆಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಯ ರಭಸಕ್ಕೆ ಪಟ್ಟಣದ ಸಮೀಪದ ಇಂಗಳಗಿ ಕೆರೆ ಹತ್ತಿರ ರೈತರು ಬೆಳೆದ ಕಬ್ಬು, ದಾಳಿಂಬೆ ಬೆಳೆಗಳು ಹಾನಿಗೊಳಗಾಗಿವೆ. ಪಟ್ಟಣ ಸೇರಿದಂತೆ ತಾಲೂಕಿನ ಪಡಗಾನೂರ, ಮುಳಸಾವಳಗಿ, ಹರನಾಳ, ನಿವಾಳಖೇಡ, ಇಂಗಳಗಿ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ಆವಾಂತರ ಸೃಷ್ಟಿಯಾಗಿವೆ.