ಚಿರತೆ ದಾಳಿ: ಜಾನುವಾರು ಬಲಿಚಿರತೆ ದಾಳಿ ಮಾಡಿ ಮೂರು ಒಂದು ಹಸು, ಎರಡು ಎಮ್ಮೆಗಳನ್ನು ತಿಂದು ಹೋದ ಘಟನೆ ತಾಲೂಕಿನ ಕಡಣಿ ಗ್ರಾಮದ ಭೀಮಾ ನದಿಯ ದಂಡೆಯ ಜಮೀನಿನಲ್ಲಿ ಈಚೆಗೆ ನಡೆದಿದೆ.ಕಡಣಿ ಭೀಮಾನದಿಯ ದಡದಲ್ಲಿನ ಜಮೀನುಗಳಲ್ಲಿ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಬಂದಿದ್ದ ಸದಾಶಿವ ಕತ್ತಿ ಅವರಿಗೆ ಸೇರಿದ ಆಕಳು ಕರು, ಚನ್ನಪ್ಪ ದೊಡ್ಡಿ ಅವರಿಗೆ ಸೇರಿದ ಎಮ್ಮೆ, ಮಲ್ಲು ದೊಡ್ಡಿ ಅವರ ಎಮ್ಮೆ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ರೈತರ ತಿಳಿಸಿದ್ದಾರೆ.